ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಳು ಸಾಗಣೆ ಲಾರಿ ಮಾಲೀಕರ ಬಂದ್‌ಸಪ್ತಾಹ

By Staff
|
Google Oneindia Kannada News

ಮರಳು ಸಾಗಣೆ ಲಾರಿ ಮಾಲೀಕರ ಬಂದ್‌ಸಪ್ತಾಹ
ಸರ್ಕಾರ ವಾರದೊಳಗೆ ಸ್ಪಂದಿಸದಿದ್ದರೆ ಮುಂದಿನ ಕ್ರಮ -ಚೆನ್ನಾರೆಡ್ಡಿ

ಬೆಂಗಳೂರು : ಕರ್ನಾಟಕ ಲಾರಿ ಮಾಲೀಕರ ಸಂಘ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒಂದು ವಾರದ ಮುಷ್ಕರವನ್ನು ಸೋಮವಾರದಿಂದ ರಾಜ್ಯದಲ್ಲಿ ಆರಂಭಿಸಿದೆ.

ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಮುಷ್ಕರವನ್ನು ಮುಂದುವರೆಸುವುದಾಗಿ ಸಂಘದ ಅಧ್ಯಕ್ಷ ಚೆನ್ನಾರೆಡ್ಡಿ ಎಚ್ಚರಿಸಿದ್ದಾರೆ.

ಈ ಮೊದಲು ಕೋಲಾರದಿಂದ ಮರಳು ಸಾಗಾಣಿಕೆ ನಡೆಯುತ್ತಿತ್ತು. ಸರ್ಕಾರ ಈ ಭಾಗದ ಮರಳು ಸಾಗಾಣಿಕೆಗೆ ನಿರ್ಬಂಧ ವಿಧಿಸಿದ ಕಾರಣ, ತುಮಕೂರಿನಿಂದ ಮರಳು ಸಾಗಾಣಿಕೆ ಮಾಡುವುದು ಅನಿವಾರ್ಯವಾಗಿದೆ. ಇದರಿಂದ ಲಾರಿ ಮಾಲೀಕರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಅಲ್ಲದೇ ಪೋಲಿಸರ ಕಿರುಕುಳ ಸಹಾ ಮಿತಿ ಮೀರಿದೆ. ಈ ಬಗ್ಗೆ ಸರ್ಕಾರ ಮೌನವಹಿಸಿದ ಕಾರಣ, ಮುಷ್ಕರ ಅನಿವಾರ್ಯವಾಗಿದೆ ಎಂದು ಲಾರಿ ಮಾಲೀಕರು ದೂರಿದ್ದಾರೆ.

ಮರಳು ಸಾಗಾಣಿಕೆಗೆ ಸಂಬಂಧಿಸಿದಂತೆ ಸರ್ಕಾರ ವ್ಯವಸ್ಥಿತ ನೀತಿಯನ್ನು ಅನುಸರಿಸದ ಕಾರಣ, ಗೊಂದಲಗಳು ಉಂಟಾಗಿ, ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಲಾರಿ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X