• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೆಟ್ರೊ ಬೇಕೋ, ಮೊನೊರೈಲು ಬೇಕೋ?

By Staff
|

ಮೆಟ್ರೊ ಬೇಕೋ, ಮೊನೊರೈಲು ಬೇಕೋ?

ಬೆಂಗಳೂರಿನ ಟ್ರಾಫಿಕ್‌ ಕಿರಿಕಿರಿಯನ್ನು ತುಸು ಕಡಿಮೆ ಮಾಡುವ ನಿಟ್ಟಿನಲ್ಲಿ ಜೀವಪಡೆಯುತ್ತಿರುವ ಮೆಟ್ರೋ ರೈಲು ಯೋಜನೆಯ ಕತ್ತು ಹಿಸುಕುವ ಪ್ರಯತ್ನ ರಾಜ್ಯದಲ್ಲಿ ನಡೆದಿದೆ. ಮಾಜಿ ಪ್ರಧಾನಿ ದೇವೇಗೌಡ, ಮೆಟ್ರೋಗಿಂತಲೂ ಮಾನೋ ರೈಲು ಸೂಕ್ತ ಎಂದು ಅಪಸ್ವರ ತೆಗೆದಿದ್ದಾರೆ. ಪರಿಸ್ಥಿತಿಯ ಲಾಭಪಡೆದು ಮೆಟ್ರೋ ಕಸಿಯಲು ಪಕ್ಕದ ರಾಜ್ಯಗಳು ಹುನ್ನಾರ ನಡೆಸಿವೆ. ಮೆಟ್ರೊ ಅನುಷ್ಠಾನಗೊಂಡರೆ ಕಾಂಗ್ರೆಸ್‌ಗೆ, ವಿಶೇಷವಾಗಿ ಎಸ್‌.ಎಂ.ಕೃಷ್ಣ ಅವರಿಗೆ ಅದರ ಕೀರ್ತಿ ಸಲ್ಲುತ್ತದೆ ಎಂಬ ಅಳುಕು ದೇವೇಗೌಡ ಅವರಲ್ಲಿದೆ. ಜನರ ಮೂಲಭೂತ ಸಮಸ್ಯೆಗಳು ಹೇಗೆ ರಾಜಕೀಯ ದಾಳಗಳಾಗುತ್ತವೆ ಎನ್ನುವುದಕ್ಕೆ ಇದೊಂದು ನಿದರ್ಶನ.

 • ಸಂಜತ್‌ ಶೃಂಗೇರಿ, ಕ್ಯಾಲಿಫೋರ್ನಿಯಾ

sanjath@hotmail.com

ದೇವೇಗೌಡ್ರು ಒಂದು ಪತ್ರ ಬರೆದು ದಿಲ್ಲಿಗೆ ಕಳಿಸಿದ್ರು ಅಂದ್ರೆ, ಬೆಂಗಳೂರಿನವರೆಲ್ಲ ತಲೆಕೆರೆದುಕೊಳ್ಳಲಿಕ್ಕೆ ಶುರು ಮಾಡುತ್ತಾರೆ ನೋಡಿ. ಅವರು ಹೇಳಿರೊದ್ರಲ್ಲಿ ಸತ್ಯ ಇದ್ದರೂ ಇರಬಹುದು, ಆದರೆ ಯಾಕೆ ಈವಾಗ ಹೇಳಿದರು? ದಿಲ್ಲಿಗೇ ಯಾಕೆ ಪತ್ರ ಬರಿಯಬೇಕಿತ್ತು (ಅವರ ಕಡೆಯವರೇ ‘ರಾಜ್ಯ’ಭಾರ ಮಾಡುವಾಗ)? ಅಂತೆಲ್ಲ ಯೋಚಿಸ್ತಾ ಇದ್ರೆ ತಲೆ ಕೆಟ್ಟೊಗುತ್ತೆ ಬಿಡ್ರಿ! ಆದ್ರೆ ಏನು ಮಾಡ್ತಿರಾ? ಇದಕ್ಕೆ ಹಾಕ್ತಾ ಇರೊ ದುಡ್ದು ನಮ್ಮ ನಿಮ್ಗಳ ದುಡ್ಡು ಅಲ್ವಾ? ರಾಜಕಾರಿಣಿಗಳ ಸ್ವಂತದ್ದೇನೂ ಅಲ್ಲವಲ್ಲ! ನಮ್ಮ ಕೈಲ್ಲಿ ಏನೂ ಆಗಲ್ಲ ಅಂತಿದ್ರೂ, ಈ ಮೆಟ್ರೊರೈಲು ಮತ್ತು ಮೊನೊರೈಲ್‌ - ಇವೆರಡರ ಅನುಕೂಲ ಮತ್ತು ಪ್ರತಿಕೂಲಗಳೇನು ಅಂತ ತಿಳ್ಕೊಳಕ್ಕೆ ಪ್ರಯತ್ನ ಮಾಡೋಣ ಬನ್ನಿ. (ಅಷ್ಟು ತಿಳುವಳಿಕೆಯನ್ನು ಹೊಂದಿರುವಂತೆ ಮಾಡಿದ್ದಕ್ಕಾದರೂ ನಮ್ಮ ಮಾಜಿ ಪ್ರಧಾನಿಯವರನ್ನು ನೆನೆಯೋಣ, ಆಫ್‌ಕೋರ್ಸ್‌ ಗೂಗಲ್‌ನ ಮೊರೆಹೋಗುವುದು ಇದ್ದೇ ಇದೆ).

ಈ ಲೇಖನದಲ್ಲಿ ನಾನು ಸಂಬಂಧಪಟ್ಟ URLಗಳನ್ನು ಉಲ್ಲೇಖಿಸುತ್ತಾ ಅದರ ಸಾರಾಂಶವನ್ನು ಕನ್ನಡದಲ್ಲಿ ತಿಳಿಸಲು ಪ್ರಯತ್ನಿಸುತ್ತೇನೆ.

Metro Railಮೆಟ್ರೊ ರೈಲು (ಮಾಹಿತಿ ಆಧಾರ - http://en.wikipedia.org/wiki/Metro) :

 • ಪ್ರಪಂಚದ ಹೆಚ್ಚಿನ ನಗರಗಳಲ್ಲಿ ಮೆಟ್ರೊ (ಅಥವಾ ಸಬ್‌ವೇ ಎನ್ನುತ್ತಾರೆ; ಲಂಡನ್‌ನಲ್ಲಿ ಟ್ಯೂಬ್‌ ಎನ್ನುತ್ತಾರೆ) ಚಾಲ್ತಿಯಲ್ಲಿದೆ. ಲಂಡನ್‌ ಮತ್ತು ಪ್ಯಾರಿಸ್‌ ನಗರದ ಮೆಟ್ರೊ ವ್ಯವಸ್ಥೆ ವಿಶ್ವವಿಖ್ಯಾತವಾಗಿದೆ.
 • ವಿದ್ಯುತ್‌ ಚಾಲಿತ ನಗರ ಸಾರಿಗೆ ರೈಲು.
 • ಇತರ ಸಾರಿಗೆ ಅಥವಾ ಸಂಚಾರಿ ವಾಹನಗಳಿಂದ ಅಡ್ಡಿ ಇಲ್ಲದೆ ನಿರ್ವಹಿಸುವಂಥದ್ದು.
 • ಜಾಸ್ತಿ frequency ಇರುವಂಥದ್ದು
 • ನಗರದ ಮಧ್ಯ ಭಾಗದಲ್ಲಿ ಹೆಚ್ಚಾಗಿ ನೆಲದಡಿ ಚಲಿಸುವಂಥದ್ದು.

ಅನುಕೂಲಗಳು :

 • ನೆಲದ ಮೇಲೆ, ಅಥವಾ ನೆಲದ ಒಳಗೆ ಚಲಿಸಬಹುದು. (ನಗರದ ಸೌಂದರ್ಯ ಹೆಚ್ಚಿಸಲು ಪೂರಕ)
 • ಹೆಚ್ಚಿನ ವೇಗ ಸಾಧಿಸಬಲ್ಲದು.
 • ನಮಗೀಗಾಗಲೇ ಪರಿಚಿತವಾಗಿರುವ ರೈಲ್‌ ವ್ಯವಸ್ಥೆ ಮತ್ತು ಸೇವೆಯನ್ನು ಇದು ಹೋಲುತ್ತದೆ.
ಪ್ರತಿಕೂಲಗಳು :
 • ನಿರ್ಮಾಣದ ವೆಚ್ಚ ಜಾಸ್ತಿ (ನೆಲದೊಳಗೆ ಸುರಂಗ ಕೊರೆಯಬೇಕಾಗಬಹುದು).
 • ನಿರ್ಮಾಣಕ್ಕೆ ಸಮಯವೂ ಹೆಚ್ಚು ಬೇಕಾಗುತ್ತದೆ.
 • ಮೆಟ್ರೊ ವ್ಯವಸ್ಥೆ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಬಲ್ಲದು.
 • ಹೆಚ್ಚಾಗಿ ಮೆಟ್ರೊ ವ್ಯವಸ್ಥೆಯಾಂದಿಗೆ ಇತರ ಸಾರಿಗೆ ವ್ಯವಸ್ಥೆಗಳನ್ನು (ಲೈಟ್‌ ರೈಲ್‌, ಸಬರ್ಬನ್‌ ರೈಲ್‌ ಇತ್ಯಾದಿ) ಜೋಡಿಸಿರುತ್ತಾರೆ.

ಮೆಟ್ರೊ ರೈಲು ಬಳಕೆಯಲ್ಲಿರುವ ನಗರಗಳು :

ಲಂಡನ್‌, ಪ್ಯಾರಿಸ್‌, ನ್ಯೂಯಾರ್ಕ್‌, ವಾಷಿಂಗ್ಟನ್‌ ಡಿಸಿ, ಸಿಂಗಾಪುರ, ದಿಲ್ಲಿ, ಇತ್ಯಾದಿ

Mono Railಮೊನೊರೈಲ್‌ (ಮಾಹಿತಿ ಆಧಾರ: http://en.wikipedia.org/wiki/Monorail) :

 • ಎತ್ತರಿಸಿದ ಪಥದ ಮೇಲೆ ಚಲಿಸುವ ವಿದ್ಯುತ್‌ ಚಾಲಿತ ಯಂತ್ರ.
 • ರಬ್ಬರ್‌ ಗಾಲಿಗಳು beam ಮೇಲೆ ಹಾಗೂ ಬದಿಯಲ್ಲಿ ಆತುಕೊಂಡು ಚಲಿಸುತ್ತವೆ.
 • ಇತರ ಸಾರಿಗೆ ಅಥವಾ ಸಂಚಾರಿ ವಾಹನಗಳಿಂದ ಅಡ್ಡಿಇಲ್ಲದೆ ನಿರ್ವಹಿಸುವಂಥದ್ದು.
 • ಕೆಲವೊಂದು ಮೊನೊರೈಲ್‌ಗಳು beamನಿಂದ ಕೆಳಗೆ ತೂಗುವಂಥ ಮಾದರಿಯವೂ ಇವೆ.

ಅನುಕೂಲಗಳು :

 • ಬೋಗಿಯ ಗಾತ್ರಕ್ಕನುಗುಣವಾಗಿ elevated beam structure ಇರುತ್ತದೆ ಮತ್ತು ಹೆಸರೇ ಸೂಚಿಸುವಂತೆ ಒಂದೇ ಕಂಬಿ ಇರುವುದರಿಂದ ಮೇಲು ರಚನೆ (elevated structure) ಅಷ್ಟೇನೂ ಭಾರಿ ಇರುವುದಿಲ್ಲ.
 • ಕಡಿಮೆ ಶಬ್ದ ಮಾಡುತ್ತದೆ.
 • ಮೇಲೆ ಹತ್ತುವುದು, ಕೆಳಗೆ ಇಳಿಯುವುದು ಹಾಗು ತಿರುಗುವುದು ಸುಲಭ (ಮೆಟ್ರೊಗೆ ಹೋಲಿಸಿದರೆ)
 • ಹಳಿ ತಪ್ಪುವ ಸಾಧ್ಯತೆ ಇಲ್ಲ.
 • ನಿರ್ಮಾಣದ ಖರ್ಚು ಮತ್ತು ಸಮಯ ಕಡಿಮೆ.

ಪ್ರತಿಕೂಲಗಳು :

 • ಇದರದೇ ಸ್ವಂತ ಪಥ ಬೇಕು.
 • ಬೋಗಿಗಳನ್ನು ಬದಲಾಯಿಸುವಲ್ಲಿ (switch) ಒಂದು ಕೊನೆ ತೆರೆದಿರುತ್ತದೆ ಇದರಿಂದ ಅಪಘಾತ ಆಗುವ ಸಾಧ್ಯತೆ ಇದೆ.
 • ಇದರಲ್ಲಿ standardized specification ಇಲ್ಲ, ಇದರಿಂದಾಗಿ ಒಂದೊಂದು ಕಡೆ ಒಂದೊಂದು ತರಹದ ಬೋಗಿಗಳು ಹಾಗೂ ಇತರ ಸಾಮಗ್ರಿಗಳ ಬಳಸಲಾಗುತ್ತದೆ. ಇದರಿಂದ ಸಾಮಗ್ರಿಗಳ ವೆಚ್ಚ ಜಾಸ್ತಿ ಆಗಬಹುದು.
 • ನೆಲದಡಿ ತೆಗೆದುಕೊಂಡು ಹೋಗಲಾಗುವುದಿಲ್ಲ, ನಗರ ಸೌಂದರ್ಯ (ಇದ್ದರೆ) ಹಾಳಾಗಬಹುದು.
 • ರಚನೆ ಸಂಪೂರ್ಣವಾಗಿ ಎತ್ತರದಲ್ಲಿರುವುದರಿಂದ ತುರ್ತುಸ್ಥಿತಿಯಲ್ಲಿ ಜನರಿಗೆ ಹೊರ ಬರಲಾಗದೆ ಇರಬಹುದು.

ಮೊನೊರೈಲ್‌ ಮಾತ್ರ ಉಪಯಾಗಿಸುವ ನಗರಗಳು :

 • ಟೊಕಿಯಾ ಮೊನೊರೈಲ್‌ - ವಾರ್ಷಿಕವಾಗಿ 100 ಮಿಲಿಯ ಜನರನ್ನು ಸಾಗಿಸುತ್ತದೆ.
 • ಡಿಸ್ನಿ ವರ್ಲ್ಡ್‌ ಮತ್ತು ಡಿಸ್ನಿ ಲ್ಯಾಂಡ್‌ (ಮನೋರಂಜನೆಗಾಗಿ)
 • ಸಿಯಾಟಲ್‌ - ಸದ್ಯಕ್ಕೆ ಒಂದು ಮೈಲಿಯಷ್ಟು ಮಾತ್ರ ಇರುವ ಮಾರ್ಗವನ್ನು, ಈ ವರ್ಷದಲ್ಲಿ 14 ಮೈಲುಗಳಿಗೆ ವಿಸ್ತರಿಸುವ ಯೋಜನೆ ಇದೆಯಂತೆ.

ಉಪಸಂಹಾರ : ವಿಶ್ವದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವುದು ಮೆಟ್ರೊ ವ್ಯವಸ್ಥೆ. ಮೊನೊರೈಲ್‌ಗೆ ಕಡಿಮೆ ವೆಚ್ಚ ಹಾಗೂ ಶೀಘ್ರದಲ್ಲಿ ನಿರ್ಮಿಸಬಹುದು (ಮನಸ್ಸು ಮಾಡಿದರೆ). ಕರ್ನಾಟಕಕ್ಕೆ, ಬೆಂಗಳೂರಿಗೆ ಯಾವುದು ಪ್ರಶಸ್ತ ಎಂಬುದು ಯಕ್ಷ ಪ್ರಶ್ನೆ! ರಾಜಕಾರಿಣಿಗಳು ಮತ್ತು ಅಧಿಕಾರಿಗಳು ತಮ್ಮ ಹಿತ ನೋಡಿ ಅಥವ ಹಟಕ್ಕೆ ಸಿಕ್ಕಿ ನಿರ್ಧರಿಸುತ್ತಾರೋ ಅಥವಾ ಜನತೆಯ ಒಳ್ಳೆಯದಕ್ಕಾಗಿ ನಿರ್ಧರಿಸುತ್ತಾರೋ ಕಾದು ನೋಡಬೇಕು.

ಮೆಟ್ರೊಗೆ ಸಂಬಂಧಿಸಿದ ವೆಬ್‌ಸೈಟ್‌ ನಲ್ಲಿ ಮೇಲೆ ಸಂಚರಿಸುವ (elevated) ಸಾರಿಗೆ ಬಗ್ಗೆ ಹೀಗಿದೆ :

"Elevated railways were a popular way to build mass transit systems in cities around the turn of the twentieth century, but they have fallen out of favour and many elevated lines were later demolished, being replaced by subways or buses. Elevated rail saw something of a resurgence in the late twentieth century, with the construction of a number of new lines such as the Docklands Light Railway in London and the Vancouver SkyTrain; in the United States a few such lines have been built, including the AirTrain JFK and the Las Vegas Monorail, but these are typically seen as more futuristic, and are not representative of the overall trends in U.S. transit development".

ಮೊನೊ ರೈಲ್‌ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಗಮನಿಸಿ :

http://www.austinmonorail.org/

http://www.austinmonorail.org/economic_sense.htm

ಬೆಂಗಳೂರು ಮೆಟ್ರೊ ರೈಲ್‌ ಬಗ್ಗೆ :

http://www.karnataka.com/watch/blr-metro/

ಮುಖಪುಟ / ಬೆಂಗಳೂರು ಡೈರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more