ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಬಂದ್‌

By Staff
|
Google Oneindia Kannada News

ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಬಂದ್‌
ಕೆಂಪುಹುಳಗಳ ಹತೋಟಿಗೆ ಮಂಡಳಿ ಪ್ರಯತ್ನ, ಬೆಂಗಳೂರು ಪಶ್ಚಿಮ ಭಾಗಕ್ಕೆ ನೀರಿನ ವ್ಯತ್ಯಯ

ಬೆಂಗಳೂರು : ನಗರಕ್ಕೆ ಜೀವನಾಡಿಯಾಗಿರುವ ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನಲ್ಲಿ ಕೆಂಪುಹುಳುಗಳು ಕಾಣಿಸಿಕೊಂಡಿರುವುದರಿಂದ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ.

ನೀರಿನ ಮಟ್ಟ ಕುಸಿದಿರುವುದರಿಂದ ಜಲಾಶಯದಲ್ಲಿ ಕೆಂಪುಹುಳಗಳು ಕಂಡು ಬಂದಿದ್ದು, ಕೊಳವೆಗಳಲ್ಲೂ ಹುಳಗಳು ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿ ಈ ಕ್ರಮಕ್ಕೆ ಮುಂದಾಗಿದೆ.

ಪರಿಸ್ಥಿತಿ ತಿಳಿಯಾಗುವ ತನಕ ಬೆಂಗಳೂರು ಪಶ್ಚಿಮ ಭಾಗಗಳಲ್ಲಿ ನೀರು ವಿತರಣೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಯವಾಗಬಹುದು. ಈ ಭಾಗಕ್ಕೆ ಸದ್ಯಕ್ಕೆ ಕಾವೇರಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಮಂಡಳಿ ಕೋರಿದೆ.

ಕೆಂಪುಹುಳಗಳ ಹತೋಟಿ ಮತ್ತು ನಿರ್ಮೂಲನೆಗೆ ಮಂಡಳಿ ಅನೇಕ ಕ್ರಮ ಕೈಗೊಂಡಿದೆ. ಜಲಾಶಯಕ್ಕೆ ಕಟ್ಲಾ ಮತ್ತು ಗ್ಯಾಂಬೂಶಿಯಾ ಜಾತಿಯ ಮೀನುಗಳನ್ನು ಬಿಡಲು ಮಂಡಳಿ ನಿರ್ಧರಿಸಿದೆ. 1998 ಮತ್ತು 2002ರಲ್ಲಿ ಇಂತಹ ಸಮಸ್ಯೆ ತಲೆದೋರಿತ್ತು.
(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X