ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಮುದ್ರಕರ ಸಹವಾಸ ಸಾಕು-ರಾಮಲಿಂಗಾರೆಡ್ಡಿ

By Staff
|
Google Oneindia Kannada News

ಖಾಸಗಿ ಮುದ್ರಕರ ಸಹವಾಸ ಸಾಕು-ರಾಮಲಿಂಗಾರೆಡ್ಡಿ
ಖಾಸಗಿ ಪಠ್ಯಪುಸ್ತಕ ಮುದ್ರಕರಿಗೆ ವಿದಾಯ, ಇನ್ನುಮುಂದೆ ಸರ್ಕಾರಿ ಮುದ್ರಣಾಲಯದಲ್ಲೇ ಪಠ್ಯಪುಸ್ತಕ ತಯಾರು.

ಮೈಸೂರು : ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ವರ್ಷದಿಂದ ಸರ್ಕಾರಿ ಮುದ್ರಣಾಲಯಗಳಲ್ಲೇ ಪಠ್ಯಪುಸ್ತಕ ಮುದ್ರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಪ್ರೌಢ ಶಿಕ್ಷಣ ಸಚಿವ ಆರ್‌.ರಾಮಲಿಂಗಾರೆಡ್ಡಿ ತಿಳಿಸಿದರು.

ಶನಿವಾರ ತಿ.ನರಸೀಪುರ ತಾಲ್ಲೂಕಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಜೂನ್‌ ತಿಂಗಳು ಅರ್ಧ ಮುಗಿದಿದ್ದರೂ ಕೆಲ ಶಾಲೆಗಳಿಗೆ ಪಠ್ಯಪುಸ್ತಕ ಸಮರ್ಪಕವಾಗಿ ವಿತರಣೆಯಾಗಿಲ್ಲ. ಖಾಸಗಿ ಮುದ್ರಕರು ನಿಗದಿತ ಸಮಯಕ್ಕೆ ಪಠ್ಯಪುಸ್ತಕಗಳನ್ನು ಒದಗಿಸಿಲ್ಲ. ಆ ಕಾರಣ ಮುಂದಿನ ವರ್ಷದಿಂದ ಖಾಸಗಿಯವರಿಗೆ ಅವಕಾಶ ನೀಡುವುದಿಲ್ಲ. ಬದಲಿಗೆ ಸರ್ಕಾರಿ ಮುದ್ರಣಾಲಯದಲ್ಲೇ ಪಠ್ಯಪುಸ್ತಕ ಮುದ್ರಿಸಲಾಗುವುದು ಎಂದು ಹೇಳಿದರು.

ಪಠ್ಯಪುಸ್ತಕಗಳಲ್ಲಿ ಕೆಲವು ತಪ್ಪುಗಳಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಪ್ರಶ್ನೆಯಾಂದಕ್ಕೆ ಉತ್ತರಿಸಿದರು.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X