ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಜಿನಿಯರಿಂಗ್‌ ಕೌನ್ಸೆಲಿಂಗ್‌ 27ರಿಂದ ಆರಂಭ

By Staff
|
Google Oneindia Kannada News

ಎಂಜಿನಿಯರಿಂಗ್‌ ಕೌನ್ಸೆಲಿಂಗ್‌ 27ರಿಂದ ಆರಂಭ
ಮೆಡಿಕಲ್‌ ಕೋರ್ಸ್‌ ಸೀಟು ಹಂಚಿಕೆಯು ಜುಲೈ 18ರಿಂದ ನಡೆಯುವ ನಿರೀಕ್ಷೆ ಇದೆ- ಶೋಭಾ ನಂಬೀಸನ್‌

ಬೆಂಗಳೂರು: ಪ್ರಸಕ್ತ ಸಾಲಿನ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಜೂನ್‌ 27ರಿಂದ ಸಾಮಾನ್ಯ ಸುತ್ತಿನ ಕೌನ್ಸೆಲಿಂಗ್‌ ನಡೆಯಲಿದ್ದು, ಜುಲೈ 18ರಂದು ವೈದ್ಯ ಕೋರ್ಸ್‌ಗಳ ಸೀಟು ಹಂಚಿಕೆ ನಡೆಯಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶೋಭಾ ನಂಬೀಸನ್‌ ತಿಳಿಸಿದ್ದಾರೆ.

ವೈದ್ಯಕೋರ್ಸ್‌ಗೆ ಸಂಬಂಧಿಸಿದಂತೆ ಕಾಮೆಡ್‌ ಕೆ ಮತ್ತು ರಾಜ್ಯ ಸರ್ಕಾರ ಮಾಡಿಕೊಂಡಿರುವ 50: 50 ಒಪ್ಪಂದಕ್ಕೆ ಸುಪ್ರೀಂಕೋರ್ಟ್‌ ಅನುಮತಿ ನೀಡುವವರೆಗೂ ಎಂಜಿನಿಯರಿಂಗ್‌ ಕೌನ್ಸಲಿಂಗ್‌ ನಡೆಸುವುದಾಗಿ ತೀರ್ಮಾನಿದೆ. ಕಳೆದ ಸಾಲಿಗೆ ಅನುಸರಿಸಿ ಎಂಜಿನಿಯರಿಂಗ್‌ ಕೋರ್ಸ್‌ 65:35 ಅನುಪಾತದಲ್ಲಿ ಸೀಟು ಹಂಚಿಕೆ ಮತ್ತು ಶುಲ್ಕ ನೀತಿಯನ್ನು ಅನುಸರಿಸಲು ನಿರ್ಧರಿಸಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಎಂಜಿನಿಯರಿಂಗ್‌ಗಾಗಿ ಮೂರು ಹೋಸ ಕಾಲೇಜುಗಳಿಗೆ ಎಐಸಿಟಿಐ ಒಪ್ಪಿಗೆ ನೀಡಿದೆ. 3ಸೆಪ್ಟೆಂಬರ್‌ 15ರ ಒಳಗೆ ಸಿಇಟಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X