ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.20 : ದೇಶದೆಲ್ಲೆಡೆ ಪೆಟ್ರೋಲ್‌ ಬಂಕ್‌ ಬಂದ್‌

By Staff
|
Google Oneindia Kannada News

ಜೂ.20 : ದೇಶದೆಲ್ಲೆಡೆ ಪೆಟ್ರೋಲ್‌ ಬಂಕ್‌ ಬಂದ್‌
ಕಮೀಷನ್‌ ಹೆಚ್ಚಳಕ್ಕೆ ಪೆಟ್ರೋಲ್‌ ಬಂಕ್‌ ಮಾಲೀಕರ ಒತ್ತಾಯ

ಬೆಂಗಳೂರು : ಪೆಟ್ರೋಲ್‌ ಬಂಕ್‌ ಮಾಲೀಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ಇಂಧನ ಮಾರಾಟದ ಕಮಿಷನ್‌ ಹೆಚ್ಚಳಕ್ಕಾಗಿ ಜೂ.19ರ ಮಧ್ಯರಾತ್ರಿಯಿಂದ ಜೂ.20ರ ಮಧ್ಯರಾತ್ರಿವರೆಗೆ ಬಂದ್‌ ಆಚರಿಸಲಾಗುತ್ತಿದ್ದು, ಈ ಅವಧಿಯಲ್ಲಿ ಪೆಟ್ರೋಲ್‌ ಬಂಕ್‌ಗಳು ಮುಚ್ಚಿರುತ್ತವೆ ಎಂದು ಪೆಟ್ರೋಲ್‌ ಬಂಕ್‌ ಮಾಲೀಕರ ಸಂಘದ ಅಧ್ಯಕ್ಷ ಭೂಷಣ್‌ ನಾರಂಗ್‌ ತಿಳಿಸಿದ್ದಾರೆ.

ಈ ಮಧ್ಯೆ ಅಖಿಲ ಭಾರತ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟ ಕೂಡ ಇದೇ ಬೇಡಿಕೆಯನ್ನು ಮುಂದಿಟ್ಟುಕೊಂಡು, ಜುಲೈ 17ರಿಂದ ಅನಿರ್ದಿಷ್ಟ ಅವಧಿಯ ಮುಷ್ಕರ ನಡೆಸುವುದಾಗಿ ಎಚ್ಚರಿಸಿದೆ.

ಪ್ರಸ್ತುತ ಪೆಟ್ರೋಲ್‌ಗೆ ಪ್ರತಿಶತ 1.59 ಮತ್ತು ಡೀಸೆಲ್‌ಗೆ 1.27ರಷ್ಟು ಕಮಿಷನ್‌ ಮಾರಾಟಗಾರರಿಗೆ ಸಂದಾಯವಾಗುತ್ತಿದೆ. ಇದನ್ನು ಶೇ.5ಕ್ಕೆ ಹೆಚ್ಚಿಸಬೇಕೆಂಬುದು ಪೆಟ್ರೋಲ್‌ ಬಂಕ್‌ ಮಾಲೀಕರ ಒತ್ತಾಯ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X