• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾತೃಭಾಷಾ ಶಿಕ್ಷಣಕ್ಕಾಗಿ ಕ.ಸಾ.ಪ. ಚಳವಳಿ ಶುರು

By Super
|

ಬೆಂಗಳೂರು : ನಗರದ ಕನ್ನಡ ಸಾಹಿತ್ಯಪರಿಷತ್ತಿನ ಆವರಣದಲ್ಲಿ ನಾಡು-ನುಡಿ ರಕ್ಷಣೆಗಾಗಿ ಮಂಗಳವಾರ ಜನಪ್ರವಾಹವೇ ಹರಿದು ಬಂದಿತ್ತು.

ಮಾತೃಭಾಷಾ ಶಿಕ್ಷಣಕ್ಕಾಗಿ ಒತ್ತಾಯಿಸಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಚಳವಳಿಯಲ್ಲಿ ಕನ್ನಡಪರ ಸಂಘಟನೆಗಳು ಮತ್ತು ಸಾಹಿತಿಗಳು ಪಾಲ್ಗೊಂಡಿದ್ದರು. ಒಂದನೇ ತರಗತಿಯಲ್ಲಿ ಆಂಗ್ಲ ಭಾಷೆಯ ಕಲಿಕೆಗೆ ತೀವ್ರ ವಿರೋಧ ವ್ಯಕ್ತವಾಯಿತು.

ನಾಡ ಗೀತೆ ಹಾಡುವುದರೊಂದಿಗೆ ಚಳವಳಿ ಆರಂಭಗೊಂಡಿತು. 24ಕ್ಕೂ ಅಧಿಕ ಸಂಘಟನೆಗಳು ಇಂದಿನ ಪ್ರತಿಭಟನೆಗೆ ಕೈಜೋಡಿಸಿದ್ದವು. ಮಾತೃಭಾಷೆಯ ಅನುಷ್ಠಾನಕ್ಕೆ ಉಚ್ಚನ್ಯಾಯಾಲದಲ್ಲಿನ ಅಡಚಣೆಗಳನ್ನು ಒಂದು ತಿಂಗಳೊಳಗಾಗಿ ಸರ್ಕಾರ ನಿವಾರಿಸಿಕೊಳ್ಳಬೇಕು ಎಂದು ಚಳವಳಿಗಾರರು ಆಗ್ರಹಿಸಿದರು.

ಕನ್ನಡ ದ್ರೋಹಿ ಶಾಲೆಗಳನ್ನು ಪತ್ತೆ ಹಚ್ಚಿ ಮಾನ್ಯತೆ ರದ್ದು ಗೊಳಿಸ ಬೇಕು. ನಮ್ಮ ಬೇಡಿಕೆಗಳತ್ತ ಸರ್ಕಾರ ಗಮನಹರಿಸದಿದ್ದರೆ ಚಳವಳಿ ಉಗ್ರ ಸ್ವರೂಪಕ್ಕೆ ತಿರುಗಲಿದೆ ಎಂದು ಚಳವಳಿನಿರತರು ಎಚ್ಚರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ್‌ ಪಾಟೀಲ, ಸಾಹಿತಿಗಳಾದ ಜಿ.ನಾರಾಯಣ, ಪ್ರೊ. ಎನ್‌.ಬಸವರಾಧ್ಯ, ಡಾ.ಸಾ.ಶಿ.ಮರುಳಯ್ಯ, ಡಾ.ಕಮಲ ಹಂಪನಾ, ಮುಖ್ಯಮಂತ್ರಿ ಚಂದ್ರು, ಸಾ.ರಾ.ಗೋವಿಂದ್‌ ಸೇರಿದಂತೆ ವಿವಿಧ ಗಣ್ಯರು ಚಳವಳಿಯಲ್ಲಿ ಭಾಗವಹಿಸಿದ್ದರು.

ಮಾತೃಭಾಷೆಯ ಚಳವಳಿ ಯಶಸ್ಸು ಸಾಧಿಸದಿದ್ದರೆ ನಮ್ಮ ಸರ್ವನಾಶ ತಪ್ಪದು ಎಂದು ಸಾಹಿತಿ ಮತ್ತು 72ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶಾಂತರಸ ಅಭಿಪ್ರಾಯಪಟ್ಟಿದ್ದಾರೆ.

(ಇನ್ಫೋ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada scholars and writers on Tuesday(Jun.14) united to protest strongly any proposal to introduce English as a subject from class I in schools under the State syllabus.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more