ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಟ್ಟಿಕಸ ಉತ್ಪಾದನೆ : ಪರಿಸರವಾದಿಗಳ ಆತಂಕ

By Staff
|
Google Oneindia Kannada News

ಗಟ್ಟಿಕಸ ಉತ್ಪಾದನೆ : ಪರಿಸರವಾದಿಗಳ ಆತಂಕ
ಸಣ್ಣ ನಗರಗಳಿಗಿಂತ ದೊಡ್ಡ ನಗರಗಳಲ್ಲಿ ಗಟ್ಟಿಕಸದ ಉತ್ಪಾದನೆ ದ್ವಿಗುಣ

ಬೆಂಗಳೂರು : ಜನದಟ್ಟಣೆ ಹೆಚ್ಚಿದಂತೆ ಕಸದ ಉತ್ಪಾದನೆಯೂ ಗಣನೀಯವಾಗಿ ಏರುತ್ತಿದೆ ಎಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಮಹಾನಿರ್ದೇಶಕ ಡಾ.ಎಂ.ಎಚ್‌.ಸ್ವಾಮಿನಾಥ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಸೋಮವಾರ ಅವರು ರಾಜ್ಯ ವಿಜ್ಞಾನ ಪರಿಷತ್ತು ಏರ್ಪಡಿಸಿದ್ದ ‘ಗಟ್ಟಿಕಸ ನಿರ್ವಹಣೆ ಪೂರ್ವಾಂದೋಲನ ತರಬೇತಿ ಕಾರ್ಯಾಗಾರ’ದಲ್ಲಿ ಮಾತನಾಡುತ್ತಿದ್ದರು. ದೇಶದ ಪ್ರಥಮ ದರ್ಜೆ ನಗರಗಳಲ್ಲಿ ಪ್ರತಿಯಾಬ್ಬ ವ್ಯಕ್ತಿಯಿಂದಲೂ 400 ಗ್ರಾಂನಷ್ಟು ಕಸ ಉತ್ಪಾದನೆಯಾಗುತ್ತಿದೆ. ಸಣ್ಣ ನಗರಗಳಲ್ಲಿ ಇದರ ಪ್ರಮಾಣ 200 ಗ್ರಾಂನಷ್ಟಿದೆ. ನಾಗರಿಕತೆ ಹೆಚ್ಚಿದಂತೆ ಗಟ್ಟಿಕಸದ ಪ್ರಮಾಣವೂ ಹೆಚ್ಚುವುದಲ್ಲದೇ, ಅದರೊಳಗಿನ ಅಂಶಗಳೂ ಹೆಚ್ಚುತ್ತಿದೆ. ಇದನ್ನು ತಡೆಗಟ್ಟಿ ಉತ್ತಮ ಪರಿಸರ ನಿರ್ಮಾಣ ಮಾಡಲು, ಗಟ್ಟಿಕಸ ನಿರ್ವಹಣೆ ಕಾರ್ಯವನ್ನು ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ನಗರೀಕರಣ ಪ್ರಕ್ರಿಯೆಯ ಜೊತೆಯಲ್ಲೇ ಕಾನೂನುಬಾಹಿರವಾಗಿ ಎಲ್ಲೆಂದರಲ್ಲಿ ಕಸ ಸುರಿಯುವ ಪ್ರವೃತ್ತಿ ಹೆಚ್ಚುತ್ತಿದೆ. ಇದನ್ನು ತಡೆಗಟ್ಟಲು ಪರಿಷತ್ತಿನ 371 ಘಟಕಗಳ ಮೂಲಕ ರಾಜ್ಯಾದ್ಯಂತ ಗಟ್ಟಿಕಸ ನಿರ್ವಹಣೆ ಬಗ್ಗೆ ಜನಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

(ಇನ್ಫೊ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X