ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಪತ್ತೆಯಾಗಿದ್ದ ರೂ. 500 ನೋಟು ಪತ್ತೆ ...?!

By Staff
|
Google Oneindia Kannada News

ನಾಪತ್ತೆಯಾಗಿದ್ದ ರೂ. 500 ನೋಟು ಪತ್ತೆ ...?!
ನಾಪತ್ತೆಯಾಗಿದ್ದ ಹಣ ಸಾರ್ವಜನಿಕವಾಗಿ ಚಲಾವಣೆಯಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೈಸೂರು : ಕಳೆದ ವರ್ಷ ನಗರದ ಭಾರತೀಯ ನೋಟು ಮುದ್ರಣ ಘಟಕದಿಂದ ನಾಪತ್ತೆಯಾಗಿದ್ದ 500 ರೂಪಾಯಿ ಕಂತೆಯಲ್ಲಿನ ನೋಟೊಂದು ಪತ್ತೆಯಾಗಿದೆ.

ಕುವೆಂಪು ನಗರದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಟಿಎಂ ಶಾಖೆಯಲ್ಲಿ ಪಡೆದ ಹಣದಲ್ಲಿ ಈ ನೋಟು ದೊರೆತಿದೆ. ಕಳೆದ ವರ್ಷ ಕಳವಾದ ಬಂಡಲ್‌ ಸಂಖ್ಯೆ 9 BN 204553 ರಲ್ಲಿನ ನೋಟು ಇದಾಗಿದ್ದು, ನೋಟು ಮುದ್ರಣ ಘಟಕದ ಅಮಾನತುಗೊಂಡ ನೌಕರ ಎಂ.ಆನಂದ್‌ ಅವರಿಗೆ ಈ ನೋಟು ದೊರೆತಿದೆ.

ನಾಪತ್ತೆಯಾಗಿದ್ದ ಹಣ ಸಾರ್ವಜನಿಕವಾಗಿ ಚಾಲ್ತಿಯಲ್ಲಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ರಿಸರ್ವ್‌ ಬ್ಯಾಂಕ್‌ ನೋಟು ಮುದ್ರಣ ಸಂಘದ ಅಧ್ಯಕ್ಷ, ಮಾಜಿ ಶಾಸಕ ಎ.ರಾಮದಾಸ್‌ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X