• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸಚಿವ ಎಚ್‌.ಕೆ.ಪಾಟೀಲ್‌?

By Staff
|

ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸಚಿವ ಎಚ್‌.ಕೆ.ಪಾಟೀಲ್‌?

ಮುಂದಿನ ಎರಡು ಮೂರು ದಿನದಲ್ಲಿ ಹೊಸ ಅಧ್ಯಕ್ಷರ ನೇಮಕ, ರೇಸ್‌ನಲ್ಲಿ ಅಂಬರೀಷ್‌, ಡಿ.ಕೆ.ಶಿವಕುಮಾರ್‌...

ಬೆಂಗಳೂರು : ರಾಜ್ಯ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಕಾಂಗ್ರೆಸ್ಸಿನ ಗುಂಪೊಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲರನ್ನು ಈ ಸ್ಥಾನಕ್ಕೆ ತರುವ ಲಾಭಿ ಆರಂಭಿಸಿದೆ.

ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಪಾಟೀಲರನ್ನು ಲಿಂಗಾಯತ ಕೋಟಾದಲ್ಲಿ ಅಧ್ಯಕ್ಷ ಗಾದಿಗೆ ತರುವ ಪ್ರಯತ್ನ ನಡೆದಿದೆ. ಇದು ಲಿಂಗಾಯತ ಸಮುದಾಯದ ಹಲವರಲ್ಲಿ ಆಕ್ರೋಶ ಹುಟ್ಟಿಸಿದೆ.

ಎಚ್‌.ಕೆ.ಪಾಟೀಲರ ಗಾಡ್‌ಫಾದರ್‌ ಎಂದೇ ಕರೆಯಲ್ಪಡುವ ಆಸ್ಕರ್‌ ಫರ್ನಾಂಡಿಸ್‌, ಮತ್ತವರ ಗೆಳೆಯರು ಈ ಲಾಭಿ ಆರಂಭಿಸಿದ್ದಾರೆ. ಲಿಂಗಾಯತರು ಅಧಿಕಾರ ಹಂಚಿಕೆಯಲ್ಲಿ, ಕಳೆದ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾದ ಕೋಪದಲ್ಲಿದ್ದಾರೆ. ಈ ಸಲ ಕಾಂಗ್ರೆಸ್‌ ಹೈಕಮಾಂಡ್‌ ಲಿಂಗಾಯತರನ್ನು ಸಮಾಧಾನ ಪಡಿಸಲು ನಿರ್ಧರಿಸಿದೆ ಎನ್ನಲಾಗಿದೆ.

ಪಾಟೀಲ್‌ ಲಿಂಗಾಯತರೇ ಅಲ್ಲವೆ ಎನ್ನುವ ಬಗ್ಗೆ ಕಳೆದ ಕೆಲವು ವರ್ಷಗಳಿಂದ ಗೊಂದಲಗಳಿವೆ. ಅವರು ನಾಮಧಾರಿ ರೆಡ್ಡಿ ಸಮುದಾಯಕ್ಕೆ ಸೇರಿದವರು. ಅವರ ಅರ್ಹತೆ, ವರ್ಚಸ್ಸಿನ ಬಗ್ಗೆ ನಮಗೆ ಕೋಪವಿಲ್ಲ. ಅವರು ಅಧ್ಯಕ್ಷರಾದರೆ ಆಗಲಿ ಸಂತೋಷವೆ. ಆದರೆ ಈ ಸಲ ಲಿಂಗಾಯತರಿಗೇ ಅಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್‌ ತೀರ್ಮಾನಿಸಿರುವಾಗ, ಪಾಟೀಲ್‌ ಅವರನ್ನು ಲಿಂಗಾಯತರ ಕೋಟಾದಲ್ಲಿ ಆಯ್ಕೆ ಮಾಡುವುದು ಸರಿಯಲ್ಲ ಎನ್ನುವುದು ಲಿಂಗಾಯತ ನಾಯಕರ ವಾದ.

ಪೂಜಾರಿ ತಲೆದಂಡ : ಶಿವಮೊಗ್ಗ ಮತ್ತು ಚಾಮರಾಜ ಪೇಟೆ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಸೋತಿರುವುದು ಕಾಂಗ್ರೆಸ್‌ ಹೈಕಮಾಂಡ್‌ ಹೊಸ ಅಧ್ಯಕ್ಷರ ಆಯ್ಕೆಗೆ ಮುಂದಾಗಿದೆ.

ರೆಸ್‌ನಲ್ಲಿರುವವರು : ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಸದ ಮತ್ತು ನಟ ಅಂಬರೀಷ್‌, ಮಾಜಿ ಸಚಿವರಾದ ಡಿ.ಬಿ.ಚಂದ್ರೇಗೌಡ, ಡಿ.ಕೆ.ಶಿವ ಕುಮಾರ್‌, ಎಚ್‌.ಸಿ.ಶ್ರೀಕಂಠಯ್ಯ, ಎಚ್‌.ವಿಶ್ವನಾಥ್‌, ಮಾಜಿ ಸಂಸದ ಜಿ.ಎಸ್‌.ಬಸವರಾಜು, ಕೇಂದ್ರ ಸಚಿವ ಎಂ.ವಿ.ರಾಜಶೇಖರನ್‌, ಸಹಕಾರ ಸಚಿವ ಆರ್‌.ವಿ.ದೇಶ ಪಾಂಡೆ ಸೇರಿದಂತೆ ಅನೇಕರು ಆಕಾಂಕ್ಷಿಗಳೆಂದು ಗುರ್ತಿಸಿಕೊಂಡಿದ್ದಾರೆ.

ಮುಂದಿನ ಎರಡು ಮೂರು ದಿನಗಳಲ್ಲಿ ಹೊಸ ಆಧ್ಯಕ್ಷರ ನೇಮಕಾತಿ ನಡೆಯುವ ಸಂಭವವಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more