ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ತ್ಯಾಜ್ಯದ ನಿರ್ಲಕ್ಷ್ಯಕ್ಕಾಗಿ ವಿಪ್ರೋಗೆ ನೋಟೀಸ್‌

By Staff
|
Google Oneindia Kannada News

ಇ-ತ್ಯಾಜ್ಯದ ನಿರ್ಲಕ್ಷ್ಯಕ್ಕಾಗಿ ವಿಪ್ರೋಗೆ ನೋಟೀಸ್‌
ಮಾಲಿನ್ಯ ನಿಯಂತ್ರಣ ಮಂಡಳಿ ಆರೋಪದಲ್ಲಿ ಹುರುಳಿಲ್ಲ -ವಿಪ್ರೋ ಸ್ಪಷ್ಟನೆ

ಬೆಂಗಳೂರು: ಇ-ತ್ಯಾಜ್ಯದ ಅಸಮರ್ಪಕ ವಿಲೇವಾರಿಗೆ ಸಂಬಂಧಿಸಿದಂತೆ ವಿಪ್ರೋ ಕಂಪನಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟೀಸ್‌ ಜಾರಿಮಾಡಿದೆ.

ಮುಂದಿನ ಮೂರು ದಿನಗಳಲ್ಲಿ ನೋಟೀಸ್‌ಗೆ ಉತ್ತರ ನೀಡಬೇಕೆಂದು ಮಂಡಳಿ ಸೂಚಿಸಿದೆ. ಖ್ಯಾತ ಸಾಫ್ಟ್‌ವೇರ್‌ ಕಂಪನಿಗಳಲ್ಲಿ ಒಂದಾಗಿರುವ ವಿಪ್ರೋ, ನಿರುಪಯುಕ್ತವಾದ ಕೀಬೋರ್ಡ್‌ಗಳು, ಮಾನಿಟರ್‌ ಹಾಗೂ ಡಿಸ್ಕ್‌ಗಳನ್ನು ಸರಿಯಾಗಿ ವಿಲೇವಾರಿ ಮಾಡದ ಆರೋಪವನ್ನು ಅದು ಹೊತ್ತಿದೆ.

ಇ-ತ್ಯಾಜ್ಯದ ಅಸಮರ್ಪಕ ವಿಲೇವಾರಿಯಿಂದ ಸೀಸ, ತವರ ಸೇರಿದಂತೆ ವಿವಿಧ ಅಪಾಯಕಾರಿ ರಾಸಾಯನಿಕಗಳು ಬಿಡುಗಡೆಯಾಗಿ, ಪರಿಸರದ ಮೇಲೆ ದುಪ್ಪರಿಣಾಮಗಳಾಗುವ ಸಾಧ್ಯತೆಗಳಿವೆ ಎಂಬುದು ಮಂಡಳಿಯ ಅಭಿಪ್ರಾಯ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪ್ರೋ ಕಂಪನಿ, ನಿರುಪಯುಕ್ತ ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನು ರೀ ಸೈಕಲಿಂಗ್‌ ಇಂಡಿಯಾ ಲಿಮಿಟೆಡ್‌ ಮೂಲಕವೇ ವಿಲೇವಾರಿ ಮಾಡಿರುವುದಾಗಿ ಸಮರ್ಥಿಸಿಕೊಂಡಿದೆ.

(ಏಜೆನ್ಸೀಸ್‌)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X