• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಾಮರಾಜಪೇಟೆ, ಶಿವಮೊಗ್ಗದಲ್ಲಿ ಶಾಂತ ಮತದಾನ

By Staff
|

ಚಾಮರಾಜಪೇಟೆ, ಶಿವಮೊಗ್ಗದಲ್ಲಿ ಶಾಂತ ಮತದಾನ

ಚಾಮರಾಜಪೇಟೆ ಶೇ.52ರಷ್ಟು, ಶಿವಮೊಗ್ಗ ಕ್ಷೇತ್ರದಲ್ಲಿ ಶೇ.48ರಷ್ಟು ಮತದಾನ

ಬೆಂಗಳೂರು : ಶಿವಮೊಗ್ಗ ಲೋಕಸಭೆ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ , ಗುರುವಾರ ನಡೆದ ಪ್ರತಿಷ್ಠಿತ ಉಪಚುನಾವಣೆಯಲ್ಲಿ ಶೇ.50ರಷ್ಟು ಮತದಾನವಾಗಿದೆ.

ಪೊಲೀಸರು ಬಿಗಿಬಂದೋಬಸ್ತು ಏರ್ಪಡಿಸಿದ್ದು, ಅಕ್ರಮ ಮತದಾನ ತಡೆಯಲು ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ ನಡೆಸಲಾಯಿತು.

ಗುರುವಾರ ಬೆಳಗ್ಗೆ 7ಗಂಟೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಆರಂಭಗೊಂಡರೂ, ಮೋಡಕವಿದ ವಾತಾವರಣದಿಂದ ಮತದಾನ ನಿಧಾನಗತಿಯಲ್ಲಿ ಸಾಗಿತ್ತು. ಮದ್ಯಾಹ್ನದ ವೇಳೆಗೆ ಮತದಾನ ತುಸು ಬಿರುಸಾಯಿತು. 12.83ಲಕ್ಷ ಮತದಾರರಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಕೇವಲ ಶೇ.48ರಷ್ಟು ಮತದಾನ ನಡೆದಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. ನಕ್ಸಲ್‌ಪೀಡಿತ 36ಮತಗಟ್ಟೆಗಳಲ್ಲಿ ಮತದಾನ ನೀರಸವಾಗಿತ್ತು.

ಹಿರಿಯ ಬಿಜೆಪಿ ಮುಖಂಡರಾದ ಡಿ.ಎಚ್‌.ಶಂಕರಮೂರ್ತಿ, ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತಚಲಾಯಿಸಿದರು.

ಚಾಮರಾಜಪೇಟೆ : ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ 97 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನವಾಗಿದ್ದು, ಕಲಾಸಿಪಾಳ್ಯದಲ್ಲಿ ಅಕ್ರಮ ಮತದಾನಕ್ಕೆ ಯತ್ನಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಿಸಿಲತಾಪವಿದ್ದರೂ ಮತದಾರರು ಉತ್ಸಾಹದಿಂದ ಮತಚಲಾಯಿಸಿದರು. ಕ್ಷೇತ್ರದಲ್ಲಿ ಶೇ.52ರಷ್ಟು ಮತದಾನವಾಗಿದ್ದು, ಸಚಿವ ರಾಮಲಿಂಗಾರೆಡ್ಡಿ, ಚೆಲುವರಾಯ ಸ್ವಾಮಿ, ಸಿ.ಚನ್ನಿಗಪ್ಪ, ಎಚ್‌.ಡಿ.ಕುಮಾರಸ್ವಾಮಿ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು.

1.6ಲಕ್ಷ ಮತದಾರರಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮತದಾರ ಪಟ್ಟಿಯಲ್ಲಿ , ತಮ್ಮ ಹೆಸರಿಲ್ಲದ ಕಾರಣ ಬಿಜೆಪಿ ಅಭ್ಯರ್ಥಿ ಪ್ರಮಿಳಾ ನೇಸರ್ಗಿ, ಮತ್ತು ಜೆಡಿಎಸ್‌ನ ಜಮೀರ್‌ ಅಹಮದ್‌ಖಾನ್‌ ಮತದಾನದಿಂದ ವಂಚಿತರಾದರು. ಕಾಂಗ್ರೆಸ್‌ ಅಭ್ಯರ್ಥಿ ಆರ್‌.ವಿ.ದೇವರಾಜು ತಮ್ಮ ಪತ್ನಿಯಾಂದಿಗೆ ಮತಚಲಾಯಿಸಿದರು.

ಭವಿಷ್ಯ ನಿರ್ಧಾರ : ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಸೇರಿದಂತೆ ಏಳು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಬಿಜೆಪಿಯಿಂದ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಬಂಗಾರಪ್ಪ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಾರಣ ಉಪಚುನಾವಣೆ ನಡೆದಿದೆ.

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ರಾಜೀನಾಮೆಯಿಂದ ತೆರವಾಗಿದ್ದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ 17ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆದು ಗುರುವಾರ ಮತಗಟ್ಟೆಗೆ ಹಾಕಿದ್ದಾರೆ.

(ಏಜನ್ಸೀಸ್‌)

ಪೂರಕ ಓದಿಗೆ-

ಶಿವಮೊಗ್ಗ ಉಪ ಚುನಾವಣೆ - ‘ಬಂ’ ಪುರಾಣ

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more