ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಕಾಪುರಗೆ ಕನಕ-ಪುರಂದರ, ಚನ್ನಪ್ಪಗೆ ಜಾನಪದ ಶ್ರೀ

By Staff
|
Google Oneindia Kannada News

ಕನಕಾಪುರಗೆ ಕನಕ-ಪುರಂದರ, ಚನ್ನಪ್ಪಗೆ ಜಾನಪದ ಶ್ರೀ
ಕರಡಿ ಮಜಲು ಮತ್ತು ಹಾರ್ಮೋನಿಯಂ ವಾದನಕ್ಕೆ ಸಂದ ಸರ್ಕಾರಿ ಗೌರವ

ಬೆಂಗಳೂರು : ಖ್ಯಾತ ಹಾರ್ಮೋನಿಯಂ ವಾದಕ ವಸಂತ ಕನಕಾಪುರ ಅವರಿಗೆ ಕನಕ ಪುರಂದರ ಪ್ರಶಸ್ತಿ ಹಾಗೂ ಕರಡಿ ಮಜಲು ವಾದಕ ಚನ್ನಪ್ಪ ಕರಡಿ ಅವರಿಗೆ ಜಾನಪದ ಶ್ರೀ ಪ್ರಶಸ್ತಿ ಸಂದಿದೆ.

ಪ್ರಸಕ್ತ ಸಾಲಿನ ರಾಜ್ಯ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಸಂಗೀತಗಾರ ಎಂ.ಜಿ.ಶ್ರೀನಿವಾಸ್‌ ಅಧ್ಯಕ್ಷತೆಯ ಆಯ್ಕೆ ಸಮಿತಿ ಸಾಧಕರನ್ನು ಆಯ್ಕೆ ಮಾಡಿದೆ. ಒಂದು ಲಕ್ಷ ರೂ. ನಗದು ಹಾಗೂ ಫಲಕವನ್ನು ಪ್ರಶಸ್ತಿಗಳು ಒಳಗೊಂಡಿವೆ.

ಕನಕ ಪುರಂದರ ಪ್ರಶಸ್ತಿ ಪಡೆದಿರುವ ಮೂಲತಃ ಹುಬ್ಬಳ್ಳಿಯವರಾದ ವಸಂತ ಕನಕಾಪುರ, ಹಾರ್ಮೋನಿಯಂ ವಾದ್ಯದಲ್ಲಿ ಸಾಧನೆಗೈದು, ದೇಶದೆಲ್ಲೆಡೆ ಕಾರ್ಯಕ್ರಮ ನೀಡಿದ್ದಾರೆ. 1975ರಿಂದಲೂ ಧಾರವಾಡ ಆಕಾಶವಾಣಿ ಕೇಂದ್ರದ ಎ ಗ್ರೇಡ್‌ ಕಲಾವಿದರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಜಾನಪದ ಶ್ರೀ ಪ್ರಶಸ್ತಿಗೆ ಪಾತ್ರರಾಗಿರುವ ಚನ್ನಪ್ಪ ಕರಡಿ, ಕರಡಿ ಮಜಲು ವಾದನದ ಮೂಲಕ ರಾಷ್ಟ್ರಮಟ್ಟದಲ್ಲಿ ಗುರ್ತಿಸಲ್ಪಟ್ಟಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X