ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜಪೇಟೆಯಲ್ಲಿ ಗೆಲುವು ಯಾರ ಮುಡಿಗೆ?

By Staff
|
Google Oneindia Kannada News

ಚಾಮರಾಜಪೇಟೆಯಲ್ಲಿ ಗೆಲುವು ಯಾರ ಮುಡಿಗೆ?
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಿತ್ತಾಟದಲ್ಲಿ ಬಿಜೆಪಿಯ ಕಮಲ ಅರಳುವುದೇ?

ಚಾಮರಾಜಪೇಟೆ : ಮಾಜಿ ಮುಖ್ಯಮಂತ್ರಿ ಮತ್ತು ಮಹಾರಾಷ್ಟ್ರ ರಾಜ್ಯಪಾಲ ಎಸ್‌.ಎಂ.ಕೃಷ್ಣ ರಾಜೀನಾಮೆಯಿಂದ ತೆರವಾದ ಚಾಮರಾಜಪೇಟೆ ವಿಧಾನಸಭೆಯ ಉಪಚುನಾವಣೆಗೆ ರಂಗ ಸಜ್ಜಾಗಿದೆ.

ಚುನಾವಣೆಯ ಅಕ್ರಮಗಳ ತಪ್ಪಿಸಲು ಕ್ಷೇತ್ರದ 97ಮತಗಟ್ಟೆಗಳಲ್ಲಿ ಮತದಾನವನ್ನು ಚಿತ್ರೀಕರಿಸಲು ಚುನಾವಣಾ ಆಯೋಗ ವ್ಯವಸ್ಥೆ ಮಾಡಿದೆ.

ಹತ್ತು ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಹದಿನಾರು ಮಂದಿಯ ಭವಿಷ್ಯ ಬರೆಯಲು ಮತದಾರ ಪ್ರಭು ಸಜ್ಜಾಗಿದ್ದಾನೆ. ಅಬ್ಬರದ ಪ್ರಚಾರ ಒಂದು ಕಡೆಯಾದರೇ, ಪ್ರತಿಷ್ಠಿತ ಕ್ಷೇತ್ರವನ್ನು ದಕ್ಕಿಸಿಕೊಳ್ಳಲು ಎಲ್ಲಾ ಪಕ್ಷಗಳು ಕಸರತ್ತು ನಡೆಸಿವೆ.

ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ಗಳು ಚುನಾವಣೆಯ ಬೆನ್ನಲ್ಲಿ ಬೀದಿ ಜಗಳಕ್ಕೆ ಇಳಿದಿವೆ. ಚುನಾವಣೆಯ ಫಲಿತಾಂಶ ಸರ್ಕಾರದ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಎರಡೂ ಪಕ್ಷಗಳೂ ಮತ್ತೊಂದು ಕಡೆ ಹೇಳುತ್ತಿವೆ. ಕಳೆದ ನಾಲ್ಕು ಚುನಾವಣೆಗಳನ್ನು ಗಮನಿಸಿದರೆ, ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಕ್ರಮವಾಗಿ ಮತದಾರ ಬೆಂಬಲಿಸುತ್ತಿರುವುದು ವ್ಯಕ್ತವಾಗಿದೆ. ದ್ವಿಮುಖ ಸ್ಪರ್ಧೆಯಂತೆ ಕಂಡರೂ ಜೆಡಿಸ್‌ ಬಲಪಡೆದಿರುವುದಂತೂ ನಿಜ. ದೇವೇಗೌಡರ ಪ್ರಚಾರದಿಂದಾಗಿ ಜೆಡಿಎಸ್‌ ಸಹಾ ತೀವ್ರ ಸ್ಪರ್ಧೆಯನ್ನುವೊಡ್ಡಿದೆ.

ಕಾಂಗ್ರೆಸ್‌ನ ಆರ್‌.ವಿ.ದೇವರಾಜ್‌, ಬಿಜೆಪಿಯ ಪ್ರಮೀಳಾ ನೇಸರ್ಗಿ ಕ್ಷೇತ್ರದಲ್ಲಿ ಸೋಲು ಗೆಲುವುಗಳನು ್ನ ಸಮಾನವಾಗಿ ಹಂಚಿಕೊಂಡಿದ್ದಾರೆ. ಜೆಡಿಎಸ್‌ನಿಂದ ಜಮೀರ್‌ ಆಹ್ಮದ್‌ ಕಣದಲ್ಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ಗೆ ತಲೆನೋವು ತಂದಿದ್ದಾರೆ. ಬಂಗಾರಪ್ಪ ತಮ್ಮ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಶೇರಿಯಾರ್‌ ಖಾನ್‌ ಅವರನ್ನು ಕಣದಲ್ಲಿ ಉಳಿಸಿದ್ದಾರೆ. ಜೆಡಿಯು ಅಭ್ಯರ್ಥಿ ಜಿ.ವಿ.ರಾಮಚಂದ್ರಯ್ಯ ಲೆಕ್ಕಕ್ಕುಂಟು ಎನ್ನುವಂತೆ ಕಣದಲ್ಲಿದ್ದಾರೆ.

1,05,706ಮತದಾರರು ಕ್ಷೇತ್ರದಲ್ಲಿದ್ದು, ಸೋಲು ಗೆಲುವುಗಳ ವಿಚಿತ್ರ ಲೆಕ್ಕಾಚಾರಗಳು ನಡೆಯುತ್ತಿವೆ. ವಿಜಯಮಾಲೆಯನ್ನು ಯಾರು ಧರಿಸುವರೋ ಸದ್ಯಕ್ಕೆ ಹೇಳುವುದು ಕಷ್ಟ.

2004ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷಗಳ ಬಲಾಬಲ :

ಎಸ್‌.ಎಂ.ಕೃಷ್ಣ (ಕಾಂಗ್ರೆಸ್‌) -27,695 ಮತಗಳು
ಮುಖ್ಯಮಂತ್ರಿ ಚಂದ್ರು(ಬಿಜೆಪಿ) -14,000 ಮತಗಳು
ಅನಂತನಾಗ್‌(ಜೆಡಿಎಸ್‌)-5,000 ಮತಗಳು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X