ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರದ ಪ್ರಥಮ ವಿಮಾನ ಮಾರಾಟ ಮಳಿಗೆ ಶುರು

By Staff
|
Google Oneindia Kannada News

ರಾಷ್ಟ್ರದ ಪ್ರಥಮ ವಿಮಾನ ಮಾರಾಟ ಮಳಿಗೆ ಶುರು
ಐಟಿ ನಗರ ಬೆಂಗ-ಳೂ-ರಿನಲ್ಲಿ ಯುಎಸ್‌ ಏವಿಯೇಷನ್‌ ಕಂಪನಿಯ ವಿಮಾನ ಮಳಿಗೆ

ಬೆಂಗಳೂರು : ಭಾರತದ ಪ್ರಪ್ರಥಮ ವಿಮಾನ ಮಾರಾಟ ಮಳಿಗೆಯನ್ನು ಇಂಡ್‌ ಯುಎಸ್‌ ಏವಿಯೇಷನ್‌ ಕಂಪನಿ ಬೆಂಗಳೂರಿನಲ್ಲಿ ಮಂಗಳವಾರ ಆರಂಭಿಸಿದೆ.

ಭಾರತದಲ್ಲಿ ಖಾಸಗಿ ವಿಮಾನಯಾನಕ್ಕೆ ಮತ್ತು ವೈಮಾನಿಕ ತರಬೇತಿಗೆ ಉಪಯೋಗಿಸಬಹುದಾದ ಹಗುರ ವಿಮಾನಗಳನ್ನು ಕಂಪನಿ ತಯಾರಿಸಲಿದೆ. ಸಂಸ್ಥೆಯು ವ್ಯಾವಹಾರಿಕ ವಿಮಾನಗಳನ್ನು ತಯಾರಿಸುವುದಲ್ಲದೇ ಅದಕ್ಕೆ ಸಂಬಂಧಪಟ್ಟ ಎಲ್ಲ ಬಿಡಿಭಾಗಗಳ ಮಾರಾಟ ಮತ್ತು ಸೇವೆಯನ್ನೂ ನೀಡಲಿದೆ.

ಅಮೆರಿಕಾ ಮತ್ತಿತರ ದೇಶಗಳಿಗೂ ಸಂಸ್ಥೆಯು ವಿಮಾನಗಳನ್ನು ರಫ್ತು ಮಾಡಲಿದೆ. ಸಂಸ್ಥೆಯು ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಸೇವೆ ನೀಡುವುದಾಗಿ ತಿಳಿಸಿದೆ.

ಸಂಸ್ಥೆಯು 1994ರಲ್ಲಿ ಆರಂಭವಾಗಿದ್ದು, ಇದರ ಮಾಲಿಕರು ಭಾರತೀಯ ಮೂಲದ ರಾಮ್‌ ಪಟ್ಟಿಸಪು. ಪ್ರಸ್ತುತ ಅಮೆರಿಕಾ ಪ್ರಜೆಯಾಗಿರುವ ಅವರು, ಕಳೆದ 35 ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X