ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಟೀಕೆಗಳ ಮಧ್ಯೆ ಸಮ್ಮಿಶ್ರ ಸರ್ಕಾರ ಸಾಧನೆಗೈದಿದೆ’

By Staff
|
Google Oneindia Kannada News

‘ಟೀಕೆಗಳ ಮಧ್ಯೆ ಸಮ್ಮಿಶ್ರ ಸರ್ಕಾರ ಸಾಧನೆಗೈದಿದೆ’
ದೇವೇಗೌಡ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯಗಳಿಲ್ಲ -ಸಿದ್ದರಾಮಯ್ಯ

ಬೆಂಗಳೂರು : ಕರ್ನಾಟಕದಲ್ಲೂ ಸಮ್ಮಿಶ್ರ ಸರ್ಕಾರ ನಡೆಸಲು ಸಾಧ್ಯವಿದೆ ಎಂಬುದನ್ನು ಜಾತ್ಯತೀತ ಜನತಾದಳ ಮತ್ತು ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರ ತೋರಿಸಿಕೊಟ್ಟಿದೆ ಎಂದು ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಿವಾರ್ಯ ಕಾರಣಗಳಿಂದ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಒಂದು ವರ್ಷ ಯಶಸ್ವಿಯಾಗಿ ಆಡಳಿತ ನಡೆಸಿದ್ದೇವೆ. ಸರ್ಕಾರ ಎಷ್ಟು ದಿನಗಳ ಬಾಳುತ್ತದೆ ಎಂಬ ಸಂಶಯಬೇಡ ಎಂದರು.

ರೈತರ, ಬಡವರ, ಗ್ರಾಮೀಣ ಪ್ರದೇಶಗಳತ್ತ ಸರ್ಕಾರ ಆಸಕ್ತಿವಹಿಸಿದೆ. ನೀರಾವರಿ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಮುಂತಾದವುಗಳ ಕಡೆಗೆ ಹೆಚ್ಚು ಗಮನಕೊಡಲಾಗಿದೆ. ಆದಾಗ್ಯೂ ಸಮ್ಮಿಶ್ರ ಸರ್ಕಾರ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಟೀಕಿಸುವುದು ಆಧಾರ ರಹಿತ ಎಂದು ಹೇಳಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಮಧ್ಯೆ ಕಳೆದ ಮೂರು ದಶಕಗಳಿಂದಲೂ ತಾತ್ವಿಕ ವಿರೋಧ ಇದ್ದೇ ಇದೆ. ಆದರೆ ಇದು ಸರ್ಕಾರದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಿಲ್ಲ. ಹಾಗಾಗಿ ಪ್ರಜಾಪ್ರಭುತ್ವದ ಆಧಾರದಲ್ಲಿ ಟೀಕೆ-ಟಿಪ್ಪಣಿಗಳು ನಡೆಯುವುದು ಸಾಮಾನ್ಯ. ಕೇವಲ ಜೆಡಿಎಸ್‌ ಮಾತ್ರ ಟೀಕೆ ಮಾಡುತ್ತಿಲ್ಲ, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಜನಾರ್ದನ ಪೂಜಾರಿ ಕೂಡ ಅದನ್ನೇ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ನನ್ನ ಮತ್ತು ದೇವೇಗೌಡರ ಮಧ್ಯೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ ಎಂಬುದು ಸುಳ್ಳು. ನಮ್ಮ ಸಂಬಂಧ ಮೊದಲು ಹೇಗಿತ್ತೋ ಈಗಲೂ ಅದೇ ರೀತಿ ಮುಂದುವರೆದಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X