ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀಬರ್ಡ್‌ ಯೋಜನೆ ಮೇ 31ಕ್ಕೆ ಸೇವೆಗೆ ನಿಯುಕ್ತ

By Staff
|
Google Oneindia Kannada News

ಸೀಬರ್ಡ್‌ ಯೋಜನೆ ಮೇ 31ಕ್ಕೆ ಸೇವೆಗೆ ನಿಯುಕ್ತ
ಸೀಬರ್ಡ್‌ ನೌಕಾನೆಲೆಗೆ ಐಎನ್‌ಎಸ್‌ ಕದಂಬ ಎಂದು ನಾಮಕರಣ ಮಾಡಲಾಗುವುದು.

ಬೆಂಗಳೂರು : ಎರಡು ದಶಕಗಳ ಕಲ್ಪನೆಯ ಕೂಸಾಗಿದ್ದ ಭಾರತೀಯ ನೌಕಾಪಡೆಯ ಮಹತ್ವಾಕಾಂಕ್ಷಿ ಯೋಜನೆ ಸೀಬರ್ಡ್‌ ಯೋಜನೆಯು ಮೇ 31ರಂದು ರಾಷ್ಟ್ರ ಸೇವೆಗೆ ಸಮರ್ಪಣೆಯಾಗಲಿದೆ.

ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಉಪಸ್ಥಿತಿಯಲ್ಲಿ, ರಕ್ಷಣಾ ಸಚಿವ ಪ್ರಣವ್‌ ಮುಖರ್ಜಿ ಅವರು ಪೂರ್ಣಗೊಂಡ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ. ನೌಕಾ ಪಡೆಯ ಮುಖ್ಯಸ್ಥ ಅಡ್ಮಿರಲ್‌ ಅರುಣ್‌ ಪ್ರಕಾಶ್‌ ಅವರೂ ಸಮಾರಂಭದಲ್ಲಿ ಹಾಜರಿರುತ್ತಾರೆ.

ಈ ಬೃಹತ್‌ ಯೋಜನೆಗೆ 3500 ಸಾವಿರ ಕೋಟಿ ರೂಪಾಯಿ ವೆಚ್ಚವಾಗಿದೆ. 1986ರಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿಅವರು ಯೋಜನೆಗೆ ಅಡಿಗಲ್ಲು ಹಾಕಿದ್ದರು. ಭಾರತೀಯ ನೌಕಾಪಡೆಯ ಕಾರ್ಯಚಟುವಟಿಕೆಗಳ ಮುಖ್ಯಕೇಂದ್ರವಾಗಲಿರುವ ಇದು, ಏಷಿಯಾದಲ್ಲೇ ಬೃಹತ್ತಾದ ನೌಕಾನೆಲೆಯಾಗಲಿದೆ. ಇದಕ್ಕೆ ಐಎನ್‌ಎಸ್‌ ಕದಂಬ ಎಂದು ನಾಮಕರಣ ಮಾಡಲಾಗುವುದು ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X