ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಳೆಯುವುದೆಲ್ಲ ಚಿನ್ನವಲ್ಲ! ಇಲ್ಲೊಮ್ಮೆ ಪರೀಕ್ಷಿಸಿ!

By Staff
|
Google Oneindia Kannada News

ಹೊಳೆಯುವುದೆಲ್ಲ ಚಿನ್ನವಲ್ಲ! ಇಲ್ಲೊಮ್ಮೆ ಪರೀಕ್ಷಿಸಿ!
ಜಯನಗರದಲ್ಲಿ ಎಮರಾಲ್ಡ್‌ ಟೆಸ್ಟಿಂಗ್‌ ಸೆಂಟರ್‌ ಸೇವೆ ಆರಂಭ, ಚಿನ್ನದ ವಂಚನೆಗೆ ಕಡಿವಾಣ

ಬೆಂಗಳೂರು : ಗ್ರಾಹಕರು ಕಳಪೆ ಚಿನ್ನದಿಂದ ಮೋಸ ಹೋಗುವ ತಾಪತ್ರಯ ಇನ್ನಿಲ್ಲ! ಚಿನ್ನದ ಗುಣಮಟ್ಟವನ್ನು ಖಚಿತವಾಗಿ ಸಾರುವ ಎಮರಾಲ್ಡ್‌ ಟೆಸ್ಟಿಂಗ್‌ ಸೆಂಟರ್‌ ಜಯನಗರದಲ್ಲಿ ಆರಂಭಗೊಂಡಿದೆ.

ಚಿನ್ನದ ಗುಣಮಟ್ಟವನ್ನು ಪರೀಕ್ಷಿಸುವ ಮತ್ತು ಈ ಬಗ್ಗೆ ಖಚಿತವಾದ ಪ್ರಮಾಣ ಪತ್ರ ನೀಡುವ ರಾಜ್ಯದ ಪ್ರಪ್ರಥಮ ಅಧಿಕೃತ ಕೇಂದ್ರವನ್ನು ಬಿ.ಐ.ಎಸ್‌.ಸಂಸ್ಥೆ ತೆರೆದಿದ್ದು, ಸೋಮವಾರದಿಂದ ಸೇವೆಯನ್ನು ಆರಂಭಿಸಿದೆ.

ಆಭರಣ ತಯಾರಿಕೆಗೆ ಕಳಪೆ ಗುಣಮಟ್ಟದ ಚಿನ್ನ (ಕಡಿಮೆ ಕ್ಯಾರೆಟ್‌ ಚಿನ್ನ)ಬಳಸುವ ಮಂದಿಗೆ ಈ ಪದ್ಧತಿಯಿಂದ ತೊಡಕಾಗಲಿದೆ. ದೇಶದಲ್ಲಿ ಮಾರಾಟವಾಗುವ ಶೇ.89ರಷ್ಟು ಚಿನ್ನದಲ್ಲಿ ಕಡಿಮೆ ಕ್ಯಾರೆಟ್‌ ಚಿನ್ನ ಬಳಕೆಯಾಗುತ್ತಿದೆ. ಈ ಮೋಸವನ್ನು ತಡೆಯಲು ಈ ವ್ಯವಸ್ಥೆ ಪೂರಕವಾಗಲಿದೆ ಎಂದು ಬಿ.ಐ.ಎಸ್‌ ನಿರ್ದೇಶಕ ಪಿ.ಸೇನ್‌ಗುಪ್ತ ಅಭಿಪ್ರಾಯಪಟ್ಟಿದ್ದಾರೆ.

ಕಳಪೆ ಚಿನ್ನದ ವಂಚನೆ ತಪ್ಪಿಸಲು ಕೇಂದ್ರ ಸರ್ಕಾರ 2000ದಲ್ಲಿ ಚಿನ್ನಕ್ಕೆ ಗುಣಮಟ್ಟದ ಮುದ್ರೆ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಬಿ.ಐ.ಎಸ್‌.ಪ್ರಮಾಣ ಪತ್ರ ಪಡೆದ ದೇಶದ 27 ಕೇಂದ್ರಗಳ ಸಾಲಿಗೆ ಬೆಂಗಳೂರಿನ ಎಮರಾಲ್ಡ್‌ ಟೆಸ್ಟಿಂಗ್‌ ಸೆಂಟರ್‌ ಹೊಸ ಸೇರ್ಪಡೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X