ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಬಿರು ಮಳೆಯ ಅಬ್ಬರ, ಆರ್ಭಟ!

By Staff
|
Google Oneindia Kannada News

ಬೆಂಗಳೂರಿನಲ್ಲಿ ಬಿರು ಮಳೆಯ ಅಬ್ಬರ, ಆರ್ಭಟ!
ಆಲಿಕಲ್ಲು, ಗುಡುಗು ಮಿಂಚುಗಳ ಅಬ್ಬರ, ಜನಜೀವನ ಅಸ್ತವ್ಯಸ್ತ

ಬೆಂಗಳೂರು : ಗುರುವಾರ ಇಳಿ ಮದ್ಯಾನ್ಹ ನಾಕು ಗಂಟೆ. ಬೆಂಗಳೂರಿನಲ್ಲಿ ರಾತ್ರಿಯಾಯಿತು!

ದಶದಿಕ್ಕುಗಳಲ್ಲಿ ಕಾರ್ಮೋಡ. ರಭಸದಿಂದ ಬೀಸುವ ಗಾಳಿ, ಚಂಡಮಾರುತವನ್ನು ಅಣಕಿಸುವ ಹಾವಳಿ. ಅಲ್ಲಲ್ಲಿ ಆಲಿಕಲ್ಲು ಮಳೆ. ಇದೇನು ಸುನಾಮಿನಾ? ಅಂತ ಗುಮಾನಿ ತರಿಸುವ ಹವಾ!

ರಣಬಿಸಿಲಿನಿಂದ ಬೇಯುತ್ತಿದ್ದ ಬೆಂಗಳೂರಲ್ಲಿ ಮಳೆ ಯಾವಾಗ ಬರತ್ತೋ ಎಂದು ಮನುಷ್ಯರು ಮತ್ತು ಪ್ರಾಣಿಗಳು ಕಾಯುತ್ತಿದ್ದವು. ಆದರೆ, ಈ ಪಾಟಿ ಹಾವಳಿ, ಇದ್ದಕ್ಕಿದ್ದಂತೆ ಎರಗುತ್ತದೆಂದು ಯಾರೂ ಎಣಿಸಿರಲಿಲ್ಲ. ಮುಂಗಾರು ಮಳೆ ಈ ಬಾರಿ ಜೂನ್‌ 14ರಿಂದ ಆರಂಭವಾಗುತ್ತದೆ ಎಂದು ಹವಾಮಾನ ಇಲಾಖೆಯವರು ನಿನ್ನೆ ತಾನೆ ಪ್ರಕಟಣೆ ಕೊಟ್ಟಿದ್ದರು. ಆಕಸ್ಮಾತ್‌ ಮುಂಗಾರು ಇವತ್ತೇ ಬಂತೋ ಅಥವಾ ಇನ್ನಾವುದಾದರೂ ಜಾತಿಯ ಮಳೆ ಬೀಳುತ್ತಿದೆಯೋ ಗೊತ್ತಿಲ್ಲ.

ಕರೆಂಟು ಹೋದ, ರಸ್ತೆಯಲ್ಲಿ ಮರಗಳು ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಸುದ್ದಿಗಳು ಬೆಂಗಳೂರಿನ ನಾನಾ ಕಡೆಯಿಂದ ಬರುತ್ತಿವೆ. ಒಂದು ಮಳೆಗೆ ಬೆಂಗಳೂರು ಬದಲಾಗುತ್ತಾ?

ಮಳೆ ಬಂತು ಮಳೆ : ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯತ್ತ ಮುಂಗಾರು ಮಾರುತ ಸಾಗುತ್ತಿರುವ ಬಗ್ಗೆ ಹವಾಮಾನ ತಜ್ಞರು ಸೂಚನೆ ನೀಡಿದ್ದಾರೆ. ಈ ಬೆನ್ನಲ್ಲಿಯೇ ಪ್ರಧಾನಿ ಮನಮೋಹನ್‌ ಸಿಂಗ್‌ ಮುಂದಿನ ಪರಿಣಾಮ ಎದುರಿಸಲು ಸಜ್ಜಾಗುವಂತೆ ಆಡಳಿತ ಯಂತ್ರಕ್ಕೆ ಸೂಚನೆ ನೀಡಿದ್ದಾರೆ.

ಉತ್ತಮ ಮುಂಗಾರಿನ ಬಗ್ಗೆ ರೈತರು ಕನಸು ಕಾಣುತ್ತಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X