ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕು ತಿಂಗಳು ಬ್ಯಾಟ್‌ ಮುಟ್ಟದಂತೆ ಸಚಿನ್‌ಗೆ ಸಲಹೆ

By Staff
|
Google Oneindia Kannada News

ನಾಲ್ಕು ತಿಂಗಳು ಬ್ಯಾಟ್‌ ಮುಟ್ಟದಂತೆ ಸಚಿನ್‌ಗೆ ಸಲಹೆ
ಎಲ್ಬೋ ಗಾಯಕ್ಕೆ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆ, ವಿಶ್ರಾಂತಿಗೆ ವೈದ್ಯರ ಸೂಚನೆ

ನವದೆಹಲಿ : ಬಹುದಿನಗಳಿಂದ ಕಾಡುತ್ತಿದ್ದ ತಮ್ಮ ಎಲ್ಬೋ ಗಾಯದಿಂದ ಮುಕ್ತರಾಗಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಚಿನ್‌ ತೆಂಡುಲ್ಕರ್‌, ನಾಲ್ಕು ತಿಂಗಳ ಕಾಲ ಕ್ರಿಕೆಟ್‌ನಿಂದ ದೂರವುಳಿಯುವ ಸಾಧ್ಯತೆಗಳಿವೆ.

ಲಂಡನ್‌ನ ಸೈಂಟ್‌ ಜಾನ್‌ ಮತ್ತು ಸೈಂಟ್‌ ಎಲಿಜಬೆತ್‌ ಆಸ್ಪತ್ರೆಯ ಖ್ಯಾತ ಎಲುಬು ತಜ್ಞ ಆ್ಯಂಡ್ರೂ ವಾಲೇಸ್‌ ಅವರು ತೆಂಡುಲ್ಕರ್‌ ಅವರ ಎಡ ಮೊಣಕೈಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ವಾಲೇಸ್‌ ಪ್ರಕಾರ 16 ವಾರಗಳ ಬಳಿಕ ಕ್ರಿಕೆಟ್‌ ಆಡಲು ಸಚಿನ್‌ ಮರಳಬಹುದು. ಅಲ್ಲಿಯವರೆಗೆ ವಿಶ್ರಾಂತಿ ಅನಿವಾರ್ಯ ಎನ್ನಲಾಗಿದೆ. ಈ ಕಾರಣದಿಂದ ಆಗಸ್ಟ್‌ನಲ್ಲಿ ಶ್ರೀಲಂಕಾದಲ್ಲಿ ನಡೆಯುವ ತ್ರಿಕೋನ ಸರಣಿ ಮತ್ತು ಸೆಪ್ಟೆಂಬರ್‌ನಲ್ಲಿ ಜಿಂಬಾಬ್ವೆ ಪ್ರವಾಸವನ್ನು ಸಚಿನ್‌ ಕಳೆದುಕೊಳ್ಳುವ ಸಾಧ್ಯತೆಯಿದೆ.
(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X