ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ದೌರ್ಜನ್ಯಕ್ಕೆ ಇಸ್ಕಾನ್‌ ತೆತ್ತ ದಂಡ 42ಕೋಟಿ!

By Staff
|
Google Oneindia Kannada News

ಲೈಂಗಿಕ ದೌರ್ಜನ್ಯಕ್ಕೆ ಇಸ್ಕಾನ್‌ ತೆತ್ತ ದಂಡ 42ಕೋಟಿ!
ಹರೇ ಕೃಷ್ಣ ವಸತಿ ಶಾಲೆಗಳಲ್ಲಿ ದೌರ್ಜನ್ಯಕ್ಕೆ ಸಿಲುಕಿದ ವಿದ್ಯಾರ್ಥಿಗಳಿಗೆ ಪರಿಹಾರ

ವಾಷಿಂಗ್ಟ್‌ನ್‌ : ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಹಗರಣಕ್ಕೆ ಸಂಬಂಧಿಸಿದಂತೆ ಈಗ ಇಸ್ಕಾನ್‌ 42ಕೋಟಿ ರೂ. (9.5 ದಶಲಕ್ಷ ಡಾಲರ್‌)ದಂಡತೆರಬೇಕಾಗಿದೆ.

ಅಮೆರಿಕ ಹಾಗೂ ಭಾರತದಲ್ಲಿನ ಹರೇ ಕೃಷ್ಣ ವಸತಿ ಶಾಲೆಗಳಲ್ಲಿ 450 ಮಂದಿ ವಿದ್ಯಾರ್ಥಿಳಿಗೆ ಲೈಂಗಿಕ, ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ನೀಡಿರುವ ಇಸ್ಕಾನ್‌ ದಂಡ ನೀಡುವಂತೆ ಅಮೆರಿಕಾದ ನ್ಯಾಯಾಲಯ ಆದೇಶಿಸಿದೆ.

ಹಿನ್ನೆಲೆ : ಅತ್ಯಾಚಾರಕ್ಕೆ ಒಳಗಾಗಿದ್ದ 92 ಮಾಜಿ ವಿದ್ಯಾರ್ಥಿಗಳು, ಇಸ್ಕಾನ್‌ನಿಂದ ತಮಗೆ 400ಮಿಲಿಯನ್‌ ಡಾಲರ್‌ ಪರಿಹಾರ ಕೊಡಿಸುವಂತೆ ಎರಡು ವರ್ಷಗಳ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನು ನ್ಯಾಯಾಲಯ ವಜಾಗೊಳಿಸಿತ್ತು.

ಈಗ ಆಗಿರುವ ಒಪ್ಪಂದದ ಪ್ರಕಾರ, ದಂಡ ತೆರಲು ಇಸ್ಕಾನ್‌ ಮುಂದೆ ಬಂದಿದೆ. ಅಲ್ಲದೇ ಕ್ಯಾಲಿಫೋರ್ನಿಯಾ ಹಾಗೂ ಪೂರ್ವ ವರ್ಜೀನಿಯಾದಲ್ಲಿ ಮಾತ್ರ ಇಸ್ಕಾನ್‌ ದೇವಸ್ಥಾನಗಳನ್ನು ನಡೆಸಲು ಸಮ್ಮತಿಸಿದೆ.
(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X