ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ಕಾಡೆಮ್ಮೆಗೆ ಗಿನ್ನಿಸ್‌ ಬುಕ್‌ ಸೇರುವ ಯೋಗ

By Staff
|
Google Oneindia Kannada News

ಮೈಸೂರಿನ ಕಾಡೆಮ್ಮೆಗೆ ಗಿನ್ನಿಸ್‌ ಬುಕ್‌ ಸೇರುವ ಯೋಗ
ಹದಿಮೂರು ಮರಿಗಳಿಗೆ ಜನ್ಮ ನೀಡಿದ ಮಹಾತಾಯಿ ರಾಣಿ(ಕಾಡೆಮ್ಮೆ)

ಮೈಸೂರು : ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿನ ಹದಿನಾರು ವರ್ಷದ ರಾಣಿ(ಕಾಡೆಮ್ಮೆ) ಈಗ ಗಿನ್ನಿಸ್‌ ದಾಖಲೆ ಸೇರಲು ಅರ್ಹತೆ ಪಡೆದಿದ್ದಾಳೆ.

ಹದಿಮೂರು ಬಾರಿ ತಾಯಿಯಾಗುವ ಮೂಲಕ ಕಾಡೆಮ್ಮೆ ದಾಖಲೆ ನಿರ್ಮಿಸಿದೆ. ಸಹಜವಾಗಿ ಕಾಡೆಮ್ಮೆಗಳು 2ಅಥವಾ 3ಮರಿಗಳಿಗೆ ಜನ್ಮನೀಡುವುದೇ ಕಷ್ಟ. ಮೃಗಾಲಯದಲ್ಲಿರುವ ಕಾಡೆಮ್ಮೆ ರಾಣಿ ಹದಿಮೂರು ಮರಿಗಳಿಗೆ ಜನ್ಮನೀಡಿದ್ದರೂ ಒಂದಿಷ್ಟು ಬಳಲದಿರುವುದು ವೈದ್ಯರನ್ನು ಸಹಾ ಚಕಿತಗೊಳಿಸಿದೆ.

ಕಾಡೆಮ್ಮೆಯ ಗರ್ಭದ ಅವಧಿ 180ದಿನಗಳು. ಆದರೆ ಪ್ರತೀ ವರ್ಷವೂ ಕಾಡೆಮ್ಮೆ ರಾಣಿ ತಾಯಿಯಾಗುತ್ತಿದೆ. ಈಗ ಮತ್ತೊಂದು ಪ್ರಸವಕ್ಕೆ ಸಜ್ಜಾಗಿದೆ.

ಗಿನ್ನಿಸ್‌ ಮತ್ತು ಲಿಮ್ಕಾ ಪುಸ್ತಕದಲ್ಲಿ ಈ ದಾಖಲೆಯನ್ನು ಸೇರ್ಪಡೆ ಮಾಡುವಂತೆ ಮೃಗಾಯಲದ ಆಡಳಿತ ವರ್ಗ ಮನವಿ ಸಲ್ಲಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X