ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಾಜಿ ನಗರದಲ್ಲಿ ಆಕಸ್ಮಿಕ ಬೆಂಕಿ :ಕೋಟ್ಯಂತರ ನಷ್ಟ

By Staff
|
Google Oneindia Kannada News

ಶಿವಾಜಿ ನಗರದಲ್ಲಿ ಆಕಸ್ಮಿಕ ಬೆಂಕಿ :ಕೋಟ್ಯಂತರ ನಷ್ಟ
ಅಗ್ನಿದುರಂತ ಕಾಣಲು ಜನಪ್ರವಾಹ, ರಸ್ತೆ ಸಂಚಾರ ಅಸ್ತವ್ಯಸ್ತ

ಬೆಂಗಳೂರು : ನಗರದ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಸಾಲೆ ಅಹಮದ್‌ಕಟ್ಟಡದ ಗೋದಾಮಿಗೆ ಬುಧವಾರ ರಾತ್ರಿ ಬೆಂಕಿ ಬಿದ್ದು, ಕೋಟ್ಯಂತರ ರೂ.ನಷ್ಟ ಸಂಭವಿಸಿದೆ.

ಶಿವಾಜಿ ನಗರದ ಬಸ್‌ಸ್ಟಾಂಡ್‌ ಸಮೀಪದ ಈ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು, ಸುತ್ತಲಿನ ಹತ್ತಾರು ಮಳಿಗೆಗಳಿಂದ ಗಣೇಶ್‌ ಟವರ್‌ಗೂ ವ್ಯಾಪಿಸಿತು. ಮಳಿಗೆಗಳಲ್ಲಿದ್ದ ಶಾಮಿಯಾನ, ಪೀಠೋಪಕರಣ, ಹವಾನಿಯಂತ್ರಿತಗಳು ಸೇರಿದಂತೆ ಇತರೆ ಸಾಧನಗಳು ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಭಸ್ಮಗೊಂಡವು.

35 ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸಲು ಹರ ಸಾಹಸವೇ ಮಾಡಬೇಕಾಯಿತು. ಶಾಮಿಯಾನ ಗೋಡೌನ್‌ನಲ್ಲಿ ಉಂಟಾದ ಶಾರ್ಟ್‌ ಸರ್ಕ್ಯೂಟ್‌ನಿಂದ ಅಗ್ನಿಆಕಸ್ಮಿಕ ಸಂಭವಿಸಿದೆ ಎನ್ನಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X