ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ ಸೀಟು ಹಂಚಿಕೆಗೆ ಮತ್ತೆರಡು ಕೇಂದ್ರಗಳ ಸ್ಥಾಪನೆ

By Staff
|
Google Oneindia Kannada News

ಸಿಇಟಿ ಸೀಟು ಹಂಚಿಕೆಗೆ ಮತ್ತೆರಡು ಕೇಂದ್ರಗಳ ಸ್ಥಾಪನೆ
ಡಾ.ಶಕುಂತಲಾ ಕತ್ರೆ ಮತ್ತು ಪ್ರೊ.ಕೆ.ಬಸವರಾಜ್‌ ಸಿಇಟಿ ಹಂಚಿಕೆ ಕೇಂದ್ರ ಸಮಿತಿಯ ಸದಸ್ಯರು.

ಬೆಂಗಳೂರು : ರಾಜ್ಯದಲ್ಲಿ ವೃತ್ತಿ ಶಿಕ್ಷಣ ಸೀಟು ಹಂಚಿಕೆಗೆ ಇನ್ನೂ ಎರಡು ಅಥವಾ ನಾಲ್ಕು ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳ ತೊಂದರೆಯನ್ನು ಪರಿಗಣಿಸಿದ ಸಿಇಟಿ ಸಮಿತಿ ಈ ಉದ್ದೇಶವನ್ನು ಕೈಗೊಂಡಿದೆ.

ರಾಜ್ಯ ಸರ್ಕಾರ ಕನಿಷ್ಠ ಪಕ್ಷ 2 ಕೇಂದ್ರಗಳನ್ನು ತೆರೆಯುವ ಉದ್ದೇಶ ಹೊಂದಿದೆ. ಸಾಧ್ಯವಾದರೆ ನಾಲ್ಕು ಕೇಂದ್ರಗಳನ್ನು ಮಾಡಲಾಗುವುದು. ಮುಂದಿನ ವರ್ಷದಿಂದ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಈ ಕುರಿತು ಇಬ್ಬರು ಸದಸ್ಯರಿರುವ ಒಂದು ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಡೀನ್‌ ಡಾ.ಶಕುಂತಲಾ ಕತ್ರೆ ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶಕ ಪ್ರೊ.ಕೆ.ಬಸವರಾಜ್‌ ಅವರು ಸದಸ್ಯರಾಗಿರುತ್ತಾರೆ.

ವಿದ್ಯಾರ್ಥಿಗಳು ಸಿಇಟಿ ಸಂಬಂಧ ವರ್ಷಕ್ಕೆ ಎರಡು, ಮೂರು ಸುತ್ತು ಬೆಂಗಳೂರಿಗೆ ಬಂದು ಹೋಗಬೇಕಿತ್ತು. ಸಿಇಟಿ ವ್ಯವಸ್ಥೆ ಆರಂಭವಾದಾಗಿನಿಂದಲೂ ಈ ಪ್ರಕ್ರಿಯೆ ಬೆಂಗಳೂರಿನಲ್ಲಿಯೇ ನಡೆದುಕೊಂಡು ಬಂದಿದೆ. ಆದರೆ ಇನ್ನು ಮುಂದೆ ದೂರದ ಊರಿನ ವಿದ್ಯಾರ್ಥಿಗಳು ಬೆಂಗಳೂರಿಗೆ ಬರುವ ತೊಂದರೆ ತಪ್ಪಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X