ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಕಿಕ್‌ ನೀಡುವಷ್ಟು ಸೋವಿ

By Staff
|
Google Oneindia Kannada News

ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಕಿಕ್‌ ನೀಡುವಷ್ಟು ಸೋವಿ
ಐದು ಸಾವಿರವಿದ್ದರೆ ವಿಮಾನದಲ್ಲಿ ದೆಹಲಿಗೆ ಹಾರಬಹುದು!

ಬೆಂಗಳೂರು : ವಿಮಾನಯಾನ ಮಾಡುವ ಪ್ರಯಾಣಿಕರಿಗೆ ಸಂತಸದ ಸುದ್ದಿಯಾಂದನ್ನು ವಿಜಯ ಮಲ್ಯ ಅವರ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಪ್ರಕಟಿಸಿದೆ.

ದೆಹಲಿ-ಬೆಂಗಳೂರು ನಡುವಿನ ಪ್ರಯಾಣಕ್ಕೆ 4.999ರೂ.ಗಳನ್ನು ನಿಗದಿ ಪಡಿಸಿದ್ದು, ಇತರೆ ಏರ್‌ಲೈನ್ಸ್‌ಗಳಿಗಿಂತಲೂ ಶೇ.60ರಷ್ಟು ರಿಯಾಯಿತಿ ಘೋಷಿಸಿದೆ. ಈ ಪ್ರಯಾಣಕ್ಕೆ ಇಂಡಿಯನ್‌ ಏರ್‌ಲೈನ್ಸ್‌ , ಜೆಟ್‌ ಏರ್‌ಲೈನ್ಸ್‌, ಸಹರ ಏರ್‌ಲೈನ್ಸ್‌ಗಳು ನಿಗದಿಪಡಿಸಿರುವ ಟಿಕೇಟ್‌ ದರ 12,600ರೂ.

ಮುಂಬೈ-ಬೆಂಗಳೂರು ಪ್ರಯಾಣಕ್ಕೆ 2.999ರೂ.ಗಳನ್ನು ಕಿಂಗ್‌ಫಿಷರ್‌ ನಿಗದಿ ಪಡಿಸಿದೆ. ಆರಂಭದಲ್ಲಿ ಮಹಾನಗರಗಳ ಮಧ್ಯೆ ಮಾತ್ರ ವಿಮಾನಯಾನವನ್ನು ಆರಂಭಿಸಲಾಗಿದ್ದು, ಮುಂಬೈ-ಬೆಂಗಳೂರು ವಿಮಾನಯಾನ ಶುಕ್ರವಾರ ಆರಂಭಗೊಂಡಿದೆ.

ದೆಹಲಿ-ಬೆಂಗಳೂರು ನಡುವಿನ ವಿಮಾನಯಾನ ಜೂನ್‌ 9ರಿಂದ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X