ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆಯ ಕಾವು ಮರೆಸಲು ನಗರದಲ್ಲಿ ಮಾವುಮೇಳ

By Staff
|
Google Oneindia Kannada News

ಬೇಸಿಗೆಯ ಕಾವು ಮರೆಸಲು ನಗರದಲ್ಲಿ ಮಾವುಮೇಳ
ರೈತರಿಂದ ಗ್ರಾಹಕರಿಗೆ ನೇರ ಮಾರಾಟ, ಹಾಪ್‌ಕಾಮ್ಸ್‌ ಬಲಗೊಳಿಸಲು ಯೋಜನೆ -ಆರ್‌.ಶ್ರೀನಿವಾಸ್‌

ಬೆಂಗಳೂರು : ಬೇಸಿಗೆಯ ಬೇಗೆಯನ್ನು ತುಸು ಮರೆಸಲು ನಗರಕ್ಕೆ ಈ ವರ್ಷ ನಾನಾ ಜಾತಿಯ ಮಾವಿನ ಹಣ್ಣುಗಳು ಲಗ್ಗೆ ಹಾಕಿವೆ. ಈ ನಿಟ್ಟಿನಲ್ಲಿ ರೈತರು ಮತ್ತು ಗ್ರಾಹಕರನ್ನು ಬೆಸೆಯಲು ಹಾಪ್‌ಕಾಮ್ಸ್‌ ನಗರದಲ್ಲಿ ಹದಿನೈದು ದಿನಗಳ ಮಾವು ಮೇಳವನ್ನು ಆಯೋಜಿಸಿದೆ.

ಹಡ್ಸನ್‌ ವೃತ್ತ , ಕೋರಮಂಗಲ, ಆರ್‌.ಟಿ.ನಗರ ಮತ್ತು ಲಾಲ್‌ಬಾಗ್‌ನಲ್ಲಿ ಈ ಮಾವು ಮೇಳವನ್ನು ನಡೆಸುತ್ತಿರುವ ಹಾಪ್‌ಕಾಮ್ಸ್‌, ಈ ವರ್ಷ 2000ಟನ್‌ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ.

ಸೇಂದೂರ, ಬೈಗನಪಲ್ಲಿ, ಮಲಗೋವಾ, ರಸಪುರಿ, ಬಾದಾಮಿ, ಮಲ್ಲಿಕಾ ಸೇರಿದಂತೆ ಬಾಯಲ್ಲಿ ನೀರೂರಿಸುವ ವಿವಿಧ ತಳಿಗಳು ಮಾರುಕಟ್ಟೆಗಿಂತ ಶೇ10ರಷ್ಟು ಕಡಿಮೆ ಬೆಲೆಯಲ್ಲಿ ಒಂದೇ ಮಳಿಗೆಯಲ್ಲಿ ಲಭ್ಯವಾಗಲಿವೆ. ರೈತರಿಂದ ನೇರವಾಗಿ ತಾಜಾ ಹಣ್ಣುಗಳನ್ನು ಗ್ರಾಹಕರು ಖರೀದಿಸಬಹುದು.

ನಗರದಲ್ಲಿ ಮಾವು ಮೇಳವನ್ನು ಬುಧವಾರ ಉದ್ಘಾಟಿಸಿದ ರಾಜ್ಯ ತೋಟಗಾರಿಕಾ ಸಚಿವ ಆರ್‌. ಶ್ರೀನಿವಾಸ್‌, ರಾಜ್ಯದ ಎಲ್ಲ ಹಾಪ್‌ಕಾಮ್ಸ್‌ಗಳ ಸಮಗ್ರ ಅಭಿವೃದ್ಧಿಗೆ 120ಕೋಟಿ ರೂ.ಗಳ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಮಾವು ಮತ್ತು ದರ ಪಟ್ಟಿ (ಐದು ಕೆ.ಜಿ.ಬುಟ್ಟಿಗೆ) :

ಬೈಗನ್‌ಪಲ್ಲಿ -100ರೂ.
ಮಲಗೋವಾ -120ರೂ.
ರಸಪುರಿ -70ರೂ.
ಬಾದಾಮಿ -120ರೂ.
ಮಲ್ಲಿಕಾ -110ರೂ.
ದಶೇರಿ -180ರೂ.
ಅಲ್ಫೋನ್ಸಾ -140ರೂ.
3ಕೆ.ಜಿ. ಅಲ್ಫೋನ್ಸಾ- 90ರೂ.
3ಕೆ.ಜಿ. ನೀಲಂ- 55ರೂ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X