• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಸ್ರು ಕಾಟ ತಪ್ಪಿಸಿದ ಸಿಸಿಬಿಗೆ ರಕ್ಷಣಾ ವೇದಿಕೆ ಸನ್ಮಾನ

By Staff
|

ನಸ್ರು ಕಾಟ ತಪ್ಪಿಸಿದ ಸಿಸಿಬಿಗೆ ರಕ್ಷಣಾ ವೇದಿಕೆ ಸನ್ಮಾನ

ಪಾತಕಿಗಳ ಹತ್ಯೆಯ ಮರುಕ ವ್ಯಕ್ತಪಡಿಸಿದರೆ ವೇದಿಕೆಯಿಂದ ಪ್ರತಿಭಟನೆ -ಟಿ.ಎ.ನಾರಾಯಣಗೌಡ

ಬೆಂಗಳೂರು : ನಗರದ ನಾಗರಿಕರಲ್ಲಿ ನಡುಕ ಹುಟ್ಟಿಸಿದ್ದ ಸಮಾಜಘಾತುಕ ಶಕ್ತಿಗಳನ್ನು ಇನ್ನಿಲ್ಲವಾಗಿಸಿದ ಕರ್ನಾಟಕ ರಾಜ್ಯ ಪೋಲೀಸ್‌ ಸಿಬ್ಬಂದಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಸನ್ಮಾನ ಸಮಾರಂಭವನ್ನು ಮೇ.16ರಂದು ಆಯೋಜಿಸಿತ್ತು.

ನಗರದ ಯವನಿಕ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿದ ಮಾಜಿ ಕೇಂದ್ರ ಸಚಿವ ಮತ್ತು ಹಾಲಿ ಲೋಕಸಭಾ ಸದಸ್ಯ ಅನಂತ್‌ಕುಮಾರ್‌ ಅವರು ಮಾತನಾಡಿ, ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಿದ ಪೋಲೀಸ್‌ ಸಿಬ್ಬಂದಿಯ ಕ್ರಮವನ್ನು ಶ್ಲಾಘಿಸಿದರು.

ಬೆಂಗಳೂರಿನಲ್ಲಿ ಅಪರಾಧ ಮತ್ತು ವಾಹನ ದಟ್ಟಣೆ ರಾಹು ಕೇತುಗಳಂತಿವೆ ಇವುಗಳನ್ನು ನಿಗ್ರಹಿಸಲು ಕೂಡಲೆ ಸಂಘ ಸಂಸ್ಥೆಗಳೊಂದಿಗೆ ಸಭೆ ಕರೆಯಬೇಕೆಂದು ಸರ್ಕಾರವನ್ನು ಆಗ್ರಹಿಸಿದ ಅವರು, ಕನ್ನಡ ಪರ ಸಂಘಟನೆಗಳು ಕನ್ನಡ ಶಾಲೆಗಳ ಸ್ಥಿತಿಗತಿಗಳ ಉನ್ನತಿಗಾಗಿ ಶ್ರಮಿಸಿದರೆ ತಾವೂ ಜೊತೆಗೂಡುವುದಾಗಿ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು ಪೋಲೀಸರ ಕ್ರಮವನ್ನು ಸ್ವಾಗತಿಸಿ, ಕೆಲವು ಸಂಘಟನೆಗಳು ಮಾನವ ಹಕ್ಕಿನ ಆಯೋಗಕ್ಕೆ ದೂರು ಕೊಡಲು ಮುಂದಾಗಿವೆ. ಹಾಗೇನಾದರೂ ಆದರೆ ಕರ್ನಾಟಕ ರಕ್ಷಣಾ ವೇದಿಕೆಯು ಬೀದಿಗಿಳಿದು ಹೋರಾಟ ಮಾಡುವುದೆಂದು ಎಚ್ಚರಿಸಿದರು.

ಮಾನವ ಹಕ್ಕುಗಳಿರುವುದು ಮಾನವರಿಗಾಗಿ ಮಾತ್ರ, ರಾಕ್ಷಸರಿಗಾಗಿ ಅಲ್ಲ ಮತ್ತು ದುಷ್ಟ ಶಕ್ತಿಗಳನ್ನು ದಮನ ಮಾಡಲು ಪೋಲೀಸರಿಗೆ ತಾವು ಎಲ್ಲಾ ರೀತಿಯ ನೆರವು ನೀಡಲು ಸಿದ್ದರಿರುವುದಾಗಿ ಹೇಳಿದರು.

ವೇದಿಕೆಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಪೋಲೀಸ್‌ ಅಧಿಕಾರಿ ಬಿ.ಕೆ.ಶಿವರಾಮ್‌, ಹಿಂದೆ ಪೋಲೀಸರು ಕೆಲವು ಸಮಾಜಘಾತುಕರ ಮನಃಪರಿವರ್ತನೆ ಮಾಡುವಲ್ಲಿ ಸಫಲರಾಗಿದ್ದರು. ಕರ್ನಾಟಕದ ಪೋಲೀಸರು ಎಂದೂ ಎನ್‌ಕೌಂಟರ್‌ಗಳಿಗೆ ಒಲವು ತೋರಿಸಿಲ್ಲ. ಎನ್‌ಕೌಂಟರ್‌ಗಳಿರುವುದು ಪೋಲೀಸರ ಆತ್ಮರಕ್ಷಣೆಗಾಗಿ ಮಾತ್ರ ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಜಿ.ನಾರಾಯಣ ಮಾತನಾಡಿ, ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವಂತೆ ಪೋಲೀಸರಿಗೆ ಕಿವಿಮಾತು ಹೇಳಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್‌.ಎಸ್‌.ದೊರೆಸ್ವಾಮಿ, ನಿವೃತ್ತ ನ್ಯಾಯಮೂರ್ತಿ ಕೋ.ಚನ್ನಬಸಪ್ಪ, ಬಿ.ಕೆ.ಶಿವರಾಮ್‌, ಹಿರಿಯ ಸಾಹಿತಿಗಳಾದ ಎಲ್‌.ಎಸ್‌.ಶೇಷಗಿರಿ ರಾಯರು, ಗಂಗ ಭೈರಯ್ಯ, ಕರ್ನಾಟಕ ರಕ್ಷಣಾ ವೇದಿಕೆಯ ಕಾನೂನು ಘಟಕದ ಅಧ್ಯಕ್ಷ ಬಸವರಾಜು, ಬೆಂಗಳೂರು ಘಟಕದ ಅಧ್ಯಕ್ಷರಾದ ಪ್ರವೀಣ್‌ಕುಮಾರ್‌ ಶೆಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅಪರಾಧ ವಿಭಾಗದ ಜಂಟಿ ಆಯುಕ್ತರಾದ ಎಮ್‌.ಸಿ.ನಾರಾಯಣ ಗೌಡರ ಅನುಪಸ್ಥಿತಿಯಲ್ಲಿ ಕೇಂದ್ರ ಆಪರಾಧ ವಿಭಾಗದ ಉಪ ಆಯುಕ್ತ ಬಿ.ಕೆ.ಶಿವರಾಮ್‌, ಇನ್ಸ್‌ಪೆಕ್ಟರ್‌ಗಳಾದ ರೇವಣ್ಣ, ಉಮೇಶ್‌.ಎಸ್‌.ಕೆ., ನಂಜುಂಡೇಗೌಡ, ರತ್ನಾಕರ ಶೆಟ್ಟಿ, ಸಹಾಯಕ ಇನ್ಸ್‌ಪೆಕ್ಟರ್‌ ಗಳಾದ ನಾಗಣ್ಣ ಗೌಡ ಉಪ ಸಹಾಯಕ ಇನ್ಸ್‌ಪೆಕ್ಟರ್‌ಗಳಾದ ಹನುಮಂತಯ್ಯ, ತಿಮ್ಮಯ್ಯು, ಮುಖ್ಯ ಕಾನ್ಸ್‌ಟೇಬಲ್‌ಗಳಾದ ಲಕ್ಕಣ್ಣ, ಬೈರಪ್ಪ, ರುದ್ರಮೂರ್ತಿ, ಸೋಮ ಶೇಖರ್‌, ಕಾನ್ಸ್‌ಟೇಬಲ್‌ಗಳಾದ ಕಾಂತರಾಜ ಅರಸ್‌, ಉಮೇಶ್‌.ಬಿ.ಆರ್‌, ಕಾಳೇಗೌಡ, ಶಿವರಾಜು, ನವಾಜ್‌ ಖಾನ್‌, ಮಹಾದೇವ್‌, ದಿನೇಶ್‌ಕುಮಾರ್‌ ಶೆಟ್ಟಿ, ಸುರೇಶ್‌, ಆನಂ ದ್‌, ವಾಹನ ಚಾಲಕರಾದ ರುದ್ರಪ್ಪ, ವೆಂಕಟೇಶ್‌, ಲಿಂಗರಾಜಯ್ಯ, ಚೌಡೇಗೌಡ ಅವರುಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಪಾಂಡವಪುರ ಸಾಂಸ್ಕೃತಿಕ ಘಟಕದವರು ಪೋಲೀಸ್‌ ಸಿಬ್ಬಂದಿಯ ಮೇಲೆ ಸ್ಥಳದಲ್ಲೇ ಲಾವಣಿ ಪದವನ್ನು ರಚಿಸಿ ಹಾಡಿದರು. ವೇದಿಕೆಯ ಬೆಂಗಳೂರು ಗ್ರಾಮಾಂತರ ಘಟಕದ ಅಧ್ಯಕ್ಷರಾದ ಎಲ್‌.ರಮೇಶ್‌ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

(ವರದಿ : ಮಹೇಶ್‌ ಜಿ.)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more