ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ ಫಲಿತಾಂಶ : ರೆಕಾರ್ಡ್‌ ಬ್ರೇಕ್‌

By Staff
|
Google Oneindia Kannada News

ದ್ವಿತೀಯ ಪಿಯುಸಿ ಫಲಿತಾಂಶ : ರೆಕಾರ್ಡ್‌ ಬ್ರೇಕ್‌
ಉಡುಪಿಗೆ ಪ್ರಥಮ ಸ್ಥಾನ, ಗ್ರಾಮೀಣ ವಿದ್ಯಾರ್ಥಿಗಳಿಂದ ಗಮನೀಯ ಸಾಧನೆ

ಬೆಂಗಳೂರು : ಇಪ್ಪತ್ತೆಂಟು ವರ್ಷಗಳ ಬಳಿಕ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ದಾಖಲೆಯ ಸುಧಾರಣೆ ಕಂಡು ಬಂದಿದೆ. ಶೇ. 52.77ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಎಂದಿನಂತೆಯೇ ಫಲಿತಾಂಶದಲ್ಲಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ, ಕೊಡಗು ತೃತೀಯ ಸ್ಥಾನದಲ್ಲಿದ್ದು, ಕೊಪ್ಪಳ ಕಡೆಯ ಸ್ಥಾನದಲ್ಲಿದೆ. ಗ್ರಾಮಾಂತರ ವಿದ್ಯಾರ್ಥಿಗಳು ಉತ್ತೀರ್ಣತೆಯಲ್ಲಿ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳನ್ನು ಹಿಮ್ಮೆಟ್ಟಿಸಿದ್ದಾರೆ.

ಸುದ್ದಿಗಾರರಿಗೆ ಮಾಹಿತ ಒದಗಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಿ.ಎನ್‌.ನಾಯಕ್‌ ಮಾತನಾಡಿ, ಮೇ.14ರಂದು ಸಂಜೆ ನಾಲ್ಕುಗಂಟೆಯ ವೇಳೆಗೆ ಫಲಿತಾಂಶ ಆಯಾ ಕಾಲೇಜುಗಳನ್ನು ತಲುಪಲಿದೆ. ಪ್ರಸಕ್ತ ಸಾಲಿನಲ್ಲಿ 4,72,360 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಎಂದು ತಿಳಿಸಿದರು.
ಜಿಲ್ಲಾವಾರು ಪಿಯುಸಿ ಫಲಿತಾಂಶ ಹೀಗಿದೆ(ಶೇಕಡವಾರು) :
1. ಉಡುಪಿ -76.87
2. ದಕ್ಷಿಣ ಕನ್ನಡ -76.16
3. ಕೊಡಗು -61.64
4. ಚಿಕ್ಕಮಗಳೂರು -61.51
5. ಉತ್ತರ ಕನ್ನಡ -60.87
6. ಬೆಂಗಳೂರು ಉತ್ತರ -60.70
7. ಬೆಂಗಳೂರು ದಕ್ಷಿಣ -58.02
8. ಶಿವಮೊಗ್ಗ -57.42
9. ಹಾಸನ -55.50
10. ಬೆಳಗಾಂ -54.17
11. ತುಮಕೂರು -53.92
12. ಮೈಸೂರು -52.85
13. ರಾಯಚೂರು -51.48
14. ಬೆಂಗಳೂರು (ಗ್ರಾಂ) -50.33
15. ಧಾರವಾಡ -50.32
16. ದಾವಣಗೆರೆ -50.17
17. ಹಾವೇರಿ -49.75
18. ಬಿಜಾಪುರ -49.69
19. ಚಾಮರಾಜನಗರ -47.13
20. ಕೋಲಾರ -46.47
21. ಗದಗ್‌ -45.84
22. ಬಾಗಲಕೋಟೆ -45.46
23. ಮಂಡ್ಯ -44.91
24. ಬಳ್ಳಾರಿ -41.73
25. ಚಿತ್ರದುರ್ಗ -41.38
26. ಗುಲ್ಬರ್ಗಾ -41.38
27. ಬೀದರ್‌ -41.16
28. ಕೊಪ್ಪಳ -40.63

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X