• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಡತನದ ಮಧ್ಯೆ ಓದುವ ಹಂಬಲದ ಸುಮ ಅರಳಲಿ!

By Staff
|

ಬಡತನದ ಮಧ್ಯೆ ಓದುವ ಹಂಬಲದ ಸುಮ ಅರಳಲಿ!

ನನ್ನ ಕನಸುಗಳು ಏನೇ ಇರಲಿ, ಮನೆಯವರಿಗೆ ಕಷ್ಟ ನೀಡಲು ಇಷ್ಟವಿಲ್ಲ -ಸುಮಲತಾ

ಬೆಂಗಳೂರು : ವಿದ್ಯೆ ಮಾರಾಟದ ಸರಕಾಗುತ್ತಿರುವ ಈ ದಿನಗಳಲ್ಲಿ , ಯಾವುದೇ ಮನೆಪಾಠದ ಹಂಗಿಲ್ಲದೇ ಶ್ರಮದಿಂದ ಸಾಧನೆ ಸಾಧ್ಯ ಎಂಬುದನ್ನು ಸುಮಲತಾ ಸಾಧಿಸಿ ತೋರಿಸಿದ್ದಾಳೆ.

ರಾಜಾಜಿನಗರದ ಜೂಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ಈಕೆ, ಬಡತನದ ನಡುವೆಯೂ ಮೂಗಿನ ಮೇಲೆ ಬೆರಳಿಡುವಂತಹ ಸಾಧನೆಗೈದಿದ್ದಾಳೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ(ಶೇ.93.28)ಮಾಡಿರುವ ಸುಮಲತಾ, ಮುಂದಿನ ಭವಿಷ್ಯದ ಬಗ್ಗೆ ಬಣ್ಣದ ಕನಸು ಕಂಡಿದ್ದಾಳೆ. ಆದರೆ ತೀವ್ರ ಆರ್ಥಿಕ ಮುಗ್ಗಟ್ಟು ಆಕೆಯ ಕನಸುಗಳನ್ನು ಕಸಿಯುತ್ತಿದೆ.

ಸಾಮಾನ್ಯ ಕೂಲಿ ಕುಟುಂಬದಂತೆಯೇ ಸುಮಲತಾ ಕುಟುಂಬದಲ್ಲಿಯೂ ಬಡತನದ ಅಟ್ಟಹಾಸವಿದೆ. ತಂದೆ ಗಜೇಂದ್ರ ತಾಯಿ ಅರುಣಾ ಇಬ್ಬರೂ ಕೂಲಿ ಕಾರ್ಮಿಕರು. ಬದುಕಿನ ಅನ್ನಕ್ಕಾಗಿ ಸರ್ಕಸ್‌ ಮಾಡುತ್ತಿದ್ದರೂ ತಮ್ಮ ಮಕ್ಕಳನ್ನು ಅಕ್ಷರ ವಂಚಿತರನ್ನಾಗಿಸಲು ಅವರ ಮನಸ್ಸು ಒಪ್ಪಲಿಲ್ಲ. ಹೀಗಾಗಿ ಕಷ್ಟನಷ್ಟಗಳ ನಡುವೆಯೇ ತಮ್ಮ ಮೂವರು ಹೆಣ್ಣು ಮಕ್ಕಳ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಸುಮಲತಾ ಅಕ್ಕ ಧನಲಕ್ಷ್ಮಿ ಸಹಾ ಓದಿನಲ್ಲಿ ಮುಂದಿದ್ದಾಳೆ. ಕಳೆದ ವರ್ಷವಷ್ಟೇ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.92ರಷ್ಟು ಅಂಕಗಳಿಸಿದ್ದ ಆಕೆ, ಪ್ರಥಮ ಪಿಯೂಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಾಳೆ. ಶಿಕ್ಷಕರಿಗಂತೂ ಧನಲಕ್ಷ್ಮಿ ಪ್ರತಿಭೆಯ ಬಗ್ಗೆ ಅಪಾರ ಮೆಚ್ಚುಗೆ. ನಾಲ್ಕನೇ ತರಗತಿಯಲ್ಲಿ ಕಿರಿಯವಳಾದ ಗೌತಮಿ ಓದುತ್ತಿದ್ದಾಳೆ.

ಈ ಎಲ್ಲದರ ಮಧ್ಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸುಮಲತಾ ತಂದೆತಾಯಂದಿರು ತಿಣುಕಾಡುತ್ತಿದ್ದಾರೆ. ‘ನನ್ನ ಕನಸುಗಳು ಏನೇ ಇರಲಿ, ಮನೆಯವರಿಗೆ ಕಷ್ಟ ನೀಡಲು ನನಗೆ ಇಷ್ಟವಿಲ್ಲ. ಹೀಗಾಗಿ ಡಿಪ್ಲೊಮಾ ಮಾಡಿ ಬೇಗ ಕೆಲಸಕ್ಕೆ ಸೇರುವ ಇರಾದೆ ನನ್ನದಾಗಿದೆ’ ಎನ್ನುತ್ತಾಳೆ ಸುಮಲತಾ.

ಹಿಂದಿಯಲ್ಲಿ ಮಾತ್ರ 85 ಅಂಕ ಗಳಿಸಿರುವ ಸುಮಲತಾ, ಉಳಿದೆಲ್ಲ ವಿಷಯಗಳಲ್ಲಿ 90ಕ್ಕೂ ಹೆಚ್ಚು ಅಂಕ ಪಡೆದಿದ್ದಾಳೆ. ಶಿಕ್ಷಣ ದಾನಕ್ಕಿಂತಲೂ ಮಿಗಿಲಾದ ದಾನ ಇನ್ನೊಂದಿಲ್ಲ. ಓದು ಮುಂದುವರೆಸಲು ಅಶಕ್ತರಾಗಿರುವ ಇವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು, ಉದಾರಿಗಳು ಕೆಳಗಿನ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳ ಸಂಪರ್ಕಿಸಬಹುದು.

ಗಜೇಂದ್ರ.ಜಿ.,

ಸಂಖ್ಯೆ-134, ಜೆ.ಸಿ.ನಗರ,

ಮೊದಲನೇ ಮುಖ್ಯರಸ್ತೆ,

ಮಹಾಲಕ್ಷ್ಮೀಪುರಂ,

ಬೆಂಗಳೂರು-560086.

ಸುಮಲತಾ ದೊಡ್ಡಮ್ಮನ ಮನೆಯ ದೂರವಾಣಿ-23134664

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more