ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ಎನ್‌ಕೌಂಟರ್‌ನಲ್ಲಿ ನಸ್ರು ಫಿನಿಷ್‌!

By Staff
|
Google Oneindia Kannada News

ಮತ್ತೊಂದು ಎನ್‌ಕೌಂಟರ್‌ನಲ್ಲಿ ನಸ್ರು ಫಿನಿಷ್‌!
ಕಾರ್ಯಾಚರಣೆಯಲ್ಲಿ ನಾಲ್ವರು ಪೋಲಿಸರಿಗೆ ಗಾಯ

ಬೆಂಗಳೂರು : ಛೋಟಾರಾಜನ್‌ ಸಹಚರನ ಎನ್‌ಕೌಂಟರ್‌ ಬೆನ್ನಲ್ಲಿಯೇ ಶನಿವಾರ ನಟೋರಿಯಸ್‌ ಪಾತಕಿಯ ವಿರುದ್ಧ ಪೋಲಿಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಪಾತಕಿ ಮೃತಪಟ್ಟಿದ್ದು, ನಾಲ್ವರು ಪೋಲಿಸರು ಗಾಯಗೊಂಡಿದ್ದಾರೆ.

ನಗರ ಸಮೀಪದ ಆನೇಕಲ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಸ್ರು ಎಂಬ ಪಾತಕಿ ಸಾವನ್ನಪ್ಪಿದ್ದಾನೆ. ಆತನ ಮನೆಯ ಮೇಲೆ ಪೋಲಿಸರು ದಾಳಿ ಮಾಡಿದಾಗ, ಆತ ಮತ್ತು ಆತನ ಸಹಚರರು ಪ್ರತಿದಾಳಿವೊಡ್ಡಿದರು. ಆ ಸಂದರ್ಭದಲ್ಲಿ ಗಾಯಗೊಂಡ ನಾಲ್ವರು ಪೋಲಿಸರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಪೋಲಿಸ್‌ ಆಯುಕ್ತ ಎಸ್‌.ಮರಿಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗಾಯಗೊಂಡಿರುವ ಇಬ್ಬರು ನಸ್ರು ಸರಚರರನ್ನು ಪೋಲಿಸರು ಬಂಧಿಸಿದ್ದಾರೆ. ನಸ್ರು ವಿರುದ್ಧ 50 ಪ್ರಕರಣಗಳು ದಾಖಲಾಗಿದ್ದು, ಜಾಮೀನು ಪಡೆದು ಹೊರಬಂದಿದ್ದ ಆತ ಮತ್ತೊಂದು ಕೊಲೆ ಯತ್ನದಲ್ಲಿ ಭಾಗಿಯಾಗಿದ್ದ ಎಂದು ಮರಿಸ್ವಾಮಿ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X