ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೌಕಾಪಡೆಗೆ ಶಕ್ತಿ ವರ್ಧಕ ‘ಐಎನ್‌ಎಸ್‌ ಕದಂಬ’ ರೆಡಿ

By Staff
|
Google Oneindia Kannada News

ನೌಕಾಪಡೆಗೆ ಶಕ್ತಿ ವರ್ಧಕ ‘ಐಎನ್‌ಎಸ್‌ ಕದಂಬ’ ರೆಡಿ
ಮೇ 9 ರಂದು ರಾಷ್ಟ್ರಕ್ಕೆ ‘ಕಡಲ ಹಕ್ಕಿ’ಯ ಸಮರ್ಪಣೆ

ಕಾರವಾರ : ದೇಶದ ಪ್ರತಿಷ್ಠಿತ ನೌಕಾನೆಲೆಯಾದ ಸೀಬರ್ಡ್‌ ಯೋಜನೆಯ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಮೇ 9ರಂದು ‘ಐಎನ್‌ಎಸ್‌ ಕದಂಬ’ ಹೆಸರಿನೊಂದಿಗೆ ರಾಷ್ಟ್ರಕ್ಕೆ ಸಮರ್ಪಣೆಯಾಗಲಿದೆ.

ಸುಮಾರು 35 ಸಾವಿರ ಕೋಟಿ ರೂಪಾಯಿ ವೆಚ್ಚದ ನೌಕಾನೆಲೆಯನ್ನು ಭಾರತೀಯ ನೌಕಾನೆಲೆಯ ಅಡ್ಮಿರಲ್‌ ಅರುಣ್‌ ಪ್ರಕಾಶ್‌ ರಾಷ್ಟ್ರಕ್ಕೆ ಸಮರ್ಪಿಸುವರು. ಈ ಮೂಲಕ ಮುಂಬಯಿ ಮತ್ತು ವಿಶಾಖ ಪಟ್ಟಣಂ ನೌಕಾನೆಲೆಯ ನಂತರ ರಾಷ್ಟ್ರದ ಮೂರನೇ ನೌಕಾನೆಲೆಯಾಗಿ ಐಎನ್‌ಎಸ್‌ ಕದಂಬ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ಕಮಾಂಡರ್‌ ಕೆ.ಪಿ. ರಾಮಚಂದ್ರನ್‌ ತಿಳಿಸಿದ್ದಾರೆ.

1985ರಲ್ಲಿ ರೂಪುಗೊಂಡ ಯೋಜನೆ, ಹಣಕಾಸಿನ ಮುಗ್ಗಟ್ಟುಗಳ ನಡುವೆ 2005ರಲ್ಲಿ ಪೂರ್ಣಗೊಂಡಿದೆ. ಹತ್ತು ಸಾವಿರ ಟನ್‌ ಭಾರ ಹೊರುವ ಸಾಮಾಥ್ಯದ 175ಮೀ. ಉದ್ದ ಮತ್ತು 28ಮೀ. ಅಗಲದ ಶಿಪ್‌ಲಿಫ್ಟ್‌ ಸೌಲಭ್ಯವನ್ನು ನೌಕೆಯಲ್ಲಿ ಕಲ್ಪಿಸಲಾಗಿದೆ. ಈ ಯೋಜನೆಗಾಗಿ ರಾಜ್ಯದಲ್ಲಿ ಅರಣ್ಯ ಭೂಮಿ ಸೇರಿದಂತೆ 4480 ಹೆಕ್ಟೇರ್‌ ಭೂಮಿಯನ್ನು ಬಳಸಿಕೊಳ್ಳಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X