ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.30ರಂದು ಗೌಡರ ‘ದರಿದ್ರ ನಾರಾಯಣ ಬಿರುಗಾಳಿ’

By Staff
|
Google Oneindia Kannada News

ಏ.30ರಂದು ಗೌಡರ ‘ದರಿದ್ರ ನಾರಾಯಣ ಬಿರುಗಾಳಿ’
ಕಾಂಗ್ರೆಸ್‌ ಪಾಳಯದಲ್ಲಿ ಆತಂಕದ ಅಲೆ ಎಬ್ಬಿಸಿರುವ ರ್ಯಾಲಿಯಲ್ಲಿ ಸಿದ್ದರಾಮಯ್ಯ

ಬೆಂಗಳೂರು : ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿರುವ ಜೆಡಿಎಸ್‌, ಸರ್ಕಾರದ ವಿರುದ್ಧ ಬೀದಿಗೆ ನಿಂತಿದೆ. ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರು ಶನಿವಾರ(ಏ.30) ಸಂಘಟಿಸಿರುವ ವಿವಾದಾತ್ಮಕ ‘ದರಿದ್ರ ನಾರಾಯಣ’ರ ರ್ಯಾಲಿ ತೀವ್ರ ಚರ್ಚೆಗೆ ಗುರಿಯಾಗಿದೆ.

ಭೂಗಳ್ಳರ ವಿರುದ್ಧ ಸಮರ ಸಾರಿರುವ ದೇವೇಗೌಡ, ಕೊಳೆಗೇರಿ ವಾಸಿಗಳು ಮತ್ತು ಬಡವರನ್ನು ಸಂಘಟಿಸಿ ಅರಮನೆ ಮೈದಾನದಲ್ಲಿ ಬೃಹತ್‌ ರ್ಯಾಲಿ ನಡೆಸಲು ಮುಂದಾಗಿದ್ದಾರೆ. ಇದು ದೇವೇಗೌಡರ ಮತ್ತೊಂದು ರಾಜಕೀಯ ತಂತ್ರ ಎಂದು ಪ್ರತಿಪಕ್ಷಗಳು ಟೀಕಿಸಿವೆ.

ಇದು ಜೆಡಿಎಸ್‌ನ ಎರಡನೇ ಬೃಹತ್‌ ಸಮಾವೇಶವಾಗಲಿದ್ದು, ಕಳೆದ ತಿಂಗಳಷ್ಟೇ ಗ್ರಾಮ ಪಂಚಾಯ್ತಿ ಸದಸ್ಯರ ಸಮಾವೇಶವನ್ನು ನಗರದಲ್ಲಿ ಪಕ್ಷ ಏರ್ಪಡಿಸಿತ್ತು. ಕಾಂಗ್ರೆಸ್‌ ಪಕ್ಷವನ್ನು ಗುರಿಯಾಗಿಸಿಕೊಂಡು ಜೆಡಿಎಸ್‌ ಶಕ್ತಿ ಪ್ರದರ್ಶನಕ್ಕೆ ನಿಂತಿದ್ದು, ರಾಜಕೀಯ ಬಿರುಗಾಳಿ ಎಬ್ಬಿಸಿದೆ.

ಭೂಗಳ್ಳರನ್ನು ಪತ್ತೆ ಹಚ್ಚಿ ಜೈಲಿಗೆ ಅಟ್ಟುವ ತನಕ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಘೋಷಿಸಿರುವ ದೇವೇಗೌಡರ ವಿರುದ್ಧ ಕಾಂಗ್ರೆಸ್‌ ಒಕ್ಕಲಿಗರು ತೊಡೆ ತಟ್ಟಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸ್ಪಂದಿಸಿರುವ ರಾಜ್ಯ ಹೈಕೋರ್ಟ್‌ ದೇವೇಗೌಡರಿಗೆ ರ್ಯಾಲಿ ನಡೆಸದಂತೆ ನೋಟೀಸ್‌ ಜಾರಿ ಮಾಡಿದ್ದರೂ, ರ್ಯಾಲಿ ಸಿದ್ಧತೆಗಳು ಭರದಿಂದ ಸಾಗಿವೆ. ರ್ಯಾಲಿಗೆ ಮುಂದಿನ ದಿನಗಳಲ್ಲಿ ಪ್ರತಿ ರ್ಯಾಲಿ ನಡೆಸಲು ಕಾಂಗ್ರೆಸ್‌ ಮತ್ತು ಬಿಜೆಪಿ ನಿರ್ಧರಿಸಿವೆ.

ರ್ಯಾಲಿಯಲ್ಲಿ ಸಿದ್ದು : ಬಡವರ ಪರವಾದ ದರಿದ್ರ ನಾರಾಯಣರ ರ್ಯಾಲಿಯನ್ನು ಪಾಲ್ಗೊಳ್ಳುವುದಾಗಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ರ್ಯಾಲಿಯಿಂದ ಸರ್ಕಾರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮಗಳಾಗುವುದಿಲ್ಲ ಎಂದು ಈ ಮಧ್ಯೆ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X