ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನಗೆ ತಾನೇ ವೈರಿಯಾಗಿರುವವನ 68 ನೇ ಹುಟ್ಟುಹಬ್ಬ!

By Super
|
Google Oneindia Kannada News

ತನಗೆ ತಾನೇ ವೈರಿಯಾಗಿರುವವನ 68 ನೇ ಹುಟ್ಟುಹಬ್ಬ! ಇವತ್ತು ಏಪ್ರಿಲ್‌ 28 ! ಇರಾಕ್‌ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್‌ ಅವರ ಜನ್ಮದಿನ. ಹ್ಯಾಪಿ ಬರ್ತ್‌ ಡೇ ಹೇಳೋಣವೆ?

ಹೇರಳ ನೈಸರ್ಗಿಕ ಸಂಪತ್ತಿನ ( ತೈಲ, ಆಯಿಲ್‌, ಎಣ್ಣೆ, ಫೂಯಲ್‌) ರಾಷ್ಟ್ರವಾದ ಇರಾಕ್‌ನಲ್ಲಿ 1979ರಿಂದ ಅಧ್ಯಕ್ಷರಾಗಿದ್ದ ಸದ್ದಾಂ ಹುಸೇನ್‌ ಯಾರಿಗೆ ತಾನೆ ಗೊತ್ತಿಲ್ಲ. 1937ಏಪ್ರಿಲ್‌ 28ರಂದು ಜನಿಸಿದ ಸದ್ದಾಂ ಅಧ್ಯಕ್ಷರಾದಂದಿನಿಂದ ಸರ್ವಾಧಿಕಾರಿ ಆಡಳಿತ ನಡೆಸಿದರು. ಇರಾನ್‌ ಮತ್ತು ಕುವೈತ್‌ ಮೇಲೆ ದುಬಾರಿ ಯುದ್ಧ ನಡೆಸಿದವರು. ಈ ಎರಡೂ ಯುದ್ಧಗಳಲ್ಲಿ ಇರಾಕ್‌ನ ಶತ್ರುರಾಷ್ಟ್ರಗಳಿಗೆ ಅಮೆರಿಕ ನೆರವು ನೀಡಿತು. ಆ ಯುದ್ಧಗಳಲ್ಲಿ ಸದ್ದಾಂ ನಿರೀಕ್ಷಿತ ಗೆಲುವು ಸಾಧಿಸಲಿಲ್ಲ.

ಇರಾಕ್‌ ಅಣ್ವಸ್ತ್ರ ಹೊಂದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಸಾರಿದ ಯುದ್ಧದಲ್ಲಿ ಸೆರೆಸಿಕ್ಕ ಸದ್ದಾಂ, ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಅಮೆರಿಕದ ಯುದ್ಧ ಕೈದಿಯಾಗಿ ವಿಚಾರಣೆ ಎದುರಿಸುತ್ತಿದ್ದಾನೆ. ಅಮಾನವೀಯ ನಿಲುವಿನಿಂದ ಸದ್ದಾಂ ಇರಾಕ್‌ನ ಸ್ಥಳೀಯರ ಕಂಗಣ್ಣಿಗೂ ಗುರಿಯಾಗಿದ್ದಾನೆ. ಸದ್ಯಕ್ಕೆ ಅಮೆರಿಕ ಪ್ರಾಯೋಜಿತ ಸರ್ಕಾರ ಸದ್ದಾಮನ ಹುಟ್ಟಡಗಿಸಿ ಇರಾಕ್‌ನಲ್ಲಿ ಅಧಿಕಾರ ನಡೆಸುತ್ತಿದೆ.

English summary
Undertrial Saddams 68th BDay.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X