ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ತೀವ್ರಹಿನ್ನಡೆ!

By Staff
|
Google Oneindia Kannada News

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ತೀವ್ರಹಿನ್ನಡೆ!
ಮುಂದಿನ ಶೈಕ್ಷಣಿಕ ವರ್ಷದಿಂದ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ

ಬೆಂಗಳೂರು : ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮತ್ತೆ ಬಾಲಕಿಯರೇ ಮೇಲುಗೈ(ಶೇ.59 ಉತ್ತೀರ್ಣ) ಸಾಧಿಸಿದ್ದಾರೆ.

ರಾಜ್ಯದಲ್ಲಿ ಪರೀಕ್ಷೆಗೆ ಕುಳಿತಿದ್ದ ಒಟ್ಟು 6,42,387ವಿದ್ಯಾರ್ಥಿಗಳಲ್ಲಿ ಶೇ.62ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ. ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಮೇಲುಗೈ ಸಾಧಿಸಿದ್ದು, ಕೋಲಾರ ಕಡೆಯ ಸ್ಥಾನದಲ್ಲಿದೆ. ಜೂನ್‌ 1ರಿಂದ 8ರವರೆಗೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳು ನಡೆಯಲಿದೆ.

ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಟಿ.ಎಂ. ಕುಮಾರ್‌, ದಕ್ಷಿಣ ಭಾರತದಲ್ಲಿಯೇ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಹಿಂದುಳಿದಿದೆ. ಕೇರಳ(ಶೇ.90) ಮತ್ತು ತಮಿಳುನಾಡು(ಶೇ.75) ಶೈಕ್ಷಣಿಕವಾಗಿ ಮುಂಚೂಣಿಯಲ್ಲಿವೆ. ರಾಜ್ಯದಲ್ಲಿ ಫಲಿತಾಂಶ ಉತ್ತಮೀಕರಣಕ್ಕೆ ಮಂಡಳಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.

ಫಲಿತಾಂಶದ ಜಿಲ್ಲಾವಾರು ವಿವರ ಹೀಗಿದೆ : ಉಡುಪಿ- ಶೇ. 79.02, ಚಿಕ್ಕೋಡಿ- ಶೇ. 77.72, ದಕ್ಷಿಣ ಕನ್ನಡ- ಶೇ. 75.73, ಯಾದಗಿರಿ- ಶೇ. 73.46, ಉತ್ತರ ಕನ್ನಡ- ಶೇ. 70.38,ಬೆಂಗಳೂರು ಉತ್ತರ- ಶೇ. 68.62, ಗದಗ- ಶೇ. 67.91, ಬೆಳಗಾವಿ- ಶೇ. 67.72, ಬಿಜಾಪುರ- ಶೇ. 66.84, ಮಂಡ್ಯ- ಶೇ. 66.28, ಬಾಗಲಕೋಟೆ- ಶೇ. 64.44, ಬೆಂಗಳೂರು ಗ್ರಾಮಾಂತರ- ಶೇ. 64.31, ಹಾವೇರಿ- ಶೇ. 64.2, ಬೆಂಗಳೂರು ದಕ್ಷಿಣ- ಶೇ. 63.38, ಚಿಕ್ಕಮಗಳೂರು- ಶೇ. 63.38, ಕೊಡಗು- ಶೇ. 62.81, ಚಿತ್ರದುರ್ಗ- ಶೇ. 61.8, ಶಿವಮೊಗ್ಗ- ಶೇ. 60.54, ಧಾರವಾಡ- ಶೇ. 59.7, ಚಾಮರಾಜನಗರ- ಶೇ. 59.63, ಕೊಪ್ಪಳ- ಶೇ. 58.1, ಮೈಸೂರು- ಶೇ. 58.4, ಬೀದರ್‌- ಶೇ. 57.45, ತುಮಕೂರು- ಶೇ. 56.92, ರಾಯಚೂರು- ಶೇ. 56.8, ಹಾಸನ- ಶೇ. 56.14, ದಾವಣಗೆರೆ- ಶೇ. 55.2, ಬಳ್ಳಾರಿ- ಶೇ. 54.57,
ಮಧುಗಿರಿ- ಶೇ. 54.03, ಗುಲ್ಬರ್ಗಾ- ಶೇ. 50.76, ಚಿಕ್ಕಬಳ್ಳಾಪುರ- ಶೇ. 48.84, ಕೋಲಾರ- ಶೇ. 48.8

ಎಸ್ಸೆಸ್ಸೆಲ್ಸಿ ಪರೀಕ್ಷಾ ವ್ಯವಸ್ಥೆ ಬದಲಿ : ಮುಂದಿನ ಶೈಕ್ಷಣಿಕ ವರ್ಷದ ಮಾರ್ಚ್‌ 2006ರ ಎಸ್ಸೆಸ್ಸೆಲ್ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ.
ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯ 100 ಅಂಕಗಳಲ್ಲಿ 60 ಅಂಕಗಳಿಗೆ ಬಹುಆಯ್ಕೆಯ ಪ್ರಶ್ನೆಗಳನ್ನು ನೀಡಿ, ಪ್ರಶ್ನೋತ್ತರ ಮಾದರಿಯನ್ನು 40 ಅಂಕಗಳಿಗೆ ಸೀಮಿತಗೊಳಿಸಲು ಮಂಡಳಿ ಮುಂದಾಗಿದೆ.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X