ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯಾಂಗ ತನಿಖೆಗೆ ಸಕಲೇಶಪುರ ದುರಂತ -ಧರಂ

By Staff
|
Google Oneindia Kannada News

ನ್ಯಾಯಾಂಗ ತನಿಖೆಗೆ ಸಕಲೇಶಪುರ ದುರಂತ -ಧರಂ
ಸಕಲೇಶಪುರ ತಾಲೂಕಿನಲ್ಲಿ ಮತ್ತೊಂದು ಕಳ್ಳಬಟ್ಟಿ ದುರಂತ : 8ಸಾವು, 27ಮಂದಿ ತೀವ್ರ ಅಸ್ವಸ್ಥ

ಬೆಂಗಳೂರು : ಸಕಲೇಶಪುರದಲ್ಲಿನ ಕಳ್ಳಬಟ್ಟಿ ದುರಂತವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜುರುಗಿಸುವುದಾಗಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ತಿಳಿಸಿದ್ದಾರೆ.

ದುರಂತದ ಸ್ಥಳಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ನೆಲಮಂಗಲ ಕಳ್ಳಬಟ್ಟಿ ಪ್ರಕರಣವನ್ನು ನ್ಯಾಯಮೂರ್ತಿ ಸದಾಶಿವ ನೇತೃತ್ವದ ಸಮಿತಿಗೆ ಒಪ್ಪಿಸಲಾಗಿದೆ. ಸಕಲೇಶಪುರದ ಘಟನೆಯ ತನಿಖೆಯನ್ನು ಸಮಿತಿಗೆ ಒಪ್ಪಿಸುವುದಾಗಿ ಹೇಳಿದರು.

ಕಳ್ಳಬಟ್ಟಿ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರವನ್ನು ನೀಡಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನಿರ್ಲಕ್ಷ್ಯ : ನೆಲಮಂಗಲದ ದುರಂತ ಮಾಸುವ ಮೊದಲೇ ಸಕಲೇಶಪುರದಲ್ಲಿ ಸಂಭವಿಸಿರುವ ಕಳ್ಳಬಟ್ಟಿ ದುರಂತ ಸರ್ಕಾರದ ಜವಬ್ದಾರಿಯನ್ನು ಪ್ರಶ್ನಿಸುವಂತೆ ಮಾಡಿದೆ. ಈ ದುರಂತಕ್ಕೆ ಆಡಳಿತ ಯಂತ್ರದ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಪಕ್ಷಗಳು ಅರೋಪಿಸಿವೆ.

ಕಳೆದ ವಾರವಷ್ಟೇ ನೆಲಮಂಗಲದಲ್ಲಿ ನಡೆದ ಕಳ್ಳಬಟ್ಟಿ ದುರಂತದಲ್ಲಿ 23 ಮಂದಿ ಸಾವನ್ನಪ್ಪಿದ್ದರು. ಆದರೆ ಸರ್ಕಾರ ನಕಲಿ ಸಾರಾಯಿ ಮಾರಾಟದ ಬಗ್ಗೆ ಗಂಭೀರವಾಗಿ ಗಮನಹರಿಸದ ಕಾರಣ, ಇಂತಹ ಘಟನೆಗೆ ಆಸ್ಪದ ನೀಡಿದಂತಾಗಿದೆ. ಸರ್ಕಾರ ಸುಮ್ಮನೆ ಕಣ್ಣೊರೆಸುವ ನಾಟಕ ನಡೆಸುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ದುರಂತ : ಹಬ್ಬದ ಸಂಭ್ರಮ ಹಂಚಿಕೊಳ್ಳಲು ಶನಿವಾರ(ಏ.23)ಕಳ್ಳಬಟ್ಟಿ ಕುಡಿದ 8ಮಂದಿ ಸಾವನ್ನಪ್ಪಿದ್ದು, 27ಮಂದಿ ಅಸ್ವಸ್ಥರಾಗಿದ್ದಾರೆ. ಬೆಳಗೋಡು ಹೋಬಳಿಯ ಗೊಳಗುಂಡೆ, ಬಾಗೆ, ರಾಮನಗರ ಮತ್ತು ಬೆಳಗೋಡು ಗ್ರಾಮಗಳಲ್ಲಿ ಕಳ್ಳಬಟ್ಟಿ ದುರ್ಘಟನೆ ಸಂಭವಿಸಿದೆ.

ದುರಂತದ ನಂತರ ಪೋಲಿಸರು ಕಾರ್ಯಪ್ರವೃತ್ತರಾಗಿದ್ದು, ಇಬ್ಬರು ಕಳ್ಳಬಟ್ಟಿ ಮಾರಾಟಗಾರರನ್ನು ಬಂಧಿಸಿ ಅವರಿಂದ 3200 ಲೀಟರ್‌ ನಕಲಿ ಮಧ್ಯವನ್ನು ವಶಪಡಿಸಿಕೊಂಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X