ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ಸಾಹಿತಿ ನಾನಿಕಾಕಾ ಎನ್ಕೆ ಅಸ್ತಂಗತ!

By Staff
|
Google Oneindia Kannada News

ಹಿರಿಯ ಸಾಹಿತಿ ನಾನಿಕಾಕಾ ಎನ್ಕೆ ಅಸ್ತಂಗತ!
ಹಿಂದಿಯ‘ ಹಮ್‌ ಆಪ್‌ ಕೆ ಹೈ ಕೌನ್‌’ ಸಿನಿಮಾ ಎನ್ಕೆಯವರ ‘ವೈನಿ’ ಕೃತಿ ಆಧಾರಿತ ಎನ್ನಲಾಗಿದೆ.

ಹುಬ್ಬಳ್ಳಿ: ಕನ್ನಡದ ಹೆಸರಾಂತ ಹಿರಿಯ ಸಾಹಿತಿ ಎನ್ಕೆ, ನಾನಿ ಕಾಕಾ ಎಂದೇ ಖ್ಯಾತರಾಗಿದ್ದ ನಾರಾಯಣ ರಾವ್‌ ಕೃಷ್ಣರಾವ್‌ ಕುಲಕರ್ಣಿ (93) ಶನಿವಾರ ನಿಧನರಾದರು.

ಇತ್ತೀಚೆಗೆ ಸ್ನಾನ ಗೃಹದಲ್ಲಿ ಕಾಲು ಜಾರಿ ಬಿದ್ದು, ತೀವ್ರ ಅಸ್ವಸ್ಥರಾಗಿದ್ದ ಎನ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ತೊಂದರೆಗೊಳಗಾಗಿದ್ದ ಪರಿಣಾಮ ಇವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ರಾತ್ರಿ ಕೊನೆಯುಸಿರೆಳೆದರು.

1913ರಲ್ಲಿ ಗದಗದಲ್ಲಿ ಜನಿಸಿದ್ದ ಎನ್ಕೆ, ‘ವೈನಿ’ ಕೃತಿ ಬಹಳ ಜನಪ್ರಿಯ ಕೃತಿಯಲ್ಲಿ ಒಂದಾಗಿತ್ತು. ಶಂ.ಭಾ.ಜೋಷಿ, ಕುರ್ತಕೋಟಿ, ಬೇಂದ್ರೆ, ಗೋಕಾಕ, ಕಣವಿ, ಪಾಪು ಇವರ ನಡುವೆ ತಮ್ಮದೇ ಆದ ಹೆಸರನ್ನು ಮಾಡಿದ್ದರು. ಹಿಂದಿಯಲ್ಲಿನ ‘ಹಮ್‌ ಆಪ್‌ ಕೆ ಹೈ ಕೌನ್‌’ ಸಿನಿಮಾ ಇದನ್ನೇ ಆಧಾರಿಸಿದ್ದು ಎನ್ನಲಾಗಿದೆ. ಇವರಿಗೆ ನಾಟಕ ಅಕಾಡೆಮಿ ಫಲೋಶಿಪ್‌ ಕೂಡ ದೊರೆತಿದೆ.

ಕನ್ನಡ ದಿನಪತ್ರಿಕೆಯಲ್ಲಿ ಬರೆಯುತ್ತಿದ್ದ ‘ಎನ್ಕೇನ ಪ್ರಕರಣೇನ’ ಇವರ ಅತ್ಯಂತ ಜನಪ್ರಿಯ ಅಂಕಣವಾಗಿತ್ತು.ಎನ್ಕೆಯವರ ನಿಧನ ಸಾಹಿತ್ಯ ಕ್ಷೇತ್ರದಲ್ಲಿ ತುಂಬಲಾರದ ನಷ್ಟವನ್ನುಂಟು ಮಾಡಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X