ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲಿಯೇ ಗೊಮ್ಮಟನ ದರ್ಶನಕ್ಕೆ ಲಿಫ್ಟ್‌ ವ್ಯವಸ್ಥೆ

By Staff
|
Google Oneindia Kannada News

ಸದ್ಯದಲ್ಲಿಯೇ ಗೊಮ್ಮಟನ ದರ್ಶನಕ್ಕೆ ಲಿಫ್ಟ್‌ ವ್ಯವಸ್ಥೆ
ಶ್ರವಣಬೆಳಗೊಳದಲ್ಲಿ 273 ಕೊಠಡಿಗಳ ಯಾತ್ರಿ ನಿವಾಸ್‌ ನಿರ್ಮಾಣ -ಹೆಚ್‌.ಡಿ.ರೇವಣ್ಣ

ಹಾಸನ : ಮುಂದಿನ ಮಹಾಮಸ್ತಾಕಾಭಿಷೇಕದ ವೇಳೆಗೆ ಶ್ರವಣಬೆಳಗೊಳದ ವಿಂಧ್ಯಗಿರಿಗೆ ಲಿಫ್ಟ್‌ ನಿರ್ಮಿಸುವ ಗುರಿ ಹೊಂದಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಲೋಕೋಪಯೋಗಿ ಮತ್ತು ಇಂಧನ ಸಚಿವ ಹೆಚ್‌.ಡಿ. ರೇವಣ್ಣ ತಿಳಿಸಿದ್ದಾರೆ.

ಶ್ರವಣ ಬೆಳಗೊಳದಲ್ಲಿ ನಡೆದ ಭಗವಾನ್‌ ಶ್ರೀ ಮಹಾವೀರನ 2604ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, 470 ಅಡಿ ಎತ್ತರದ ವಿಂಧ್ಯಗಿರಿಯ 656 ಮೆಟ್ಟಿಲುಗಳನ್ನು ಹತ್ತಲು ಪ್ರವಾಸಿಕರಿಗೆ ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಲಿಫ್ಟ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಮಹಾ ಮಸ್ತಕಾಭಿಷೇಕದ ಹಿನ್ನೆಲೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೇಂದ್ರ 75ಕೋಟಿ ಮತ್ತು ರಾಜ್ಯ ಸರ್ಕಾರ 25ಕೋಟಿ ರೂ. ಮಂಜೂರು ಮಾಡಿದೆ ಎಂದ ಸಚಿವರು, ಶ್ರವಣ ಬೆಳಗೊಳದಲ್ಲಿ 6.50ಕೋಟಿ ರೂ. ವೆಚ್ಚದಲ್ಲಿ 273ಕೊಠಡಿಗಳನ್ನು ಹಾಗೂ 11 ಡಾರ್ಮಂಟೆರಿ ನಿರ್ಮಾಣದ ಯೋಜನೆಯನ್ನು ಈ ಸಂದರ್ಭದಲ್ಲಿ ಪ್ರಕಟಿಸಿದರು.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X