ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದ ಲೈಂಗಿಕ ಕಾರ್ಯಕರ್ತೆಯರಿಂದ ಒಕ್ಕೂಟ ರಚನೆ

By Staff
|
Google Oneindia Kannada News

ನಗರದ ಲೈಂಗಿಕ ಕಾರ್ಯಕರ್ತೆಯರಿಂದ ಒಕ್ಕೂಟ ರಚನೆ
ಮೇ ತಿಂಗಳ ಆರಂಭದಲ್ಲಿ ಸಂಘಕ್ಕೆ ಚಾಲನೆ -ವಕೀಲ ಪ್ರೇಮ್‌

ಬೆಂಗಳೂರು : ಮುಂಬಯಿ ಮತ್ತು ದೆಹಲಿಯಲ್ಲಿದ್ದ ಲೈಂಗಿಕ ಕಾರ್ಯಕರ್ತೆಯರ ಒಕ್ಕೂಟಗಳು, ಶೀಘ್ರದಲ್ಲಿಯೇ ಉದ್ಯಾನನಗರಿಯಲ್ಲೂ ತಲೆ ಎತ್ತಲಿವೆ.

ಅಧಿಕೃತವಾಗಿ ಲೈಂಗಿಕ ಕಾರ್ಯಕರ್ತೆಯರ ಒಕ್ಕೂಟಕ್ಕೆ ನಗರದಲ್ಲಿ ಮೇ ತಿಂಗಳ ಆರಂಭದಲ್ಲಿ ಚಾಲನೆ ಸಿಕ್ಕಲಿದೆ ಎಂದು ಕಾರ್ಮಿಕ ಒಕ್ಕೂಟವೊಂದರ ನಾಯಕ ಹಾಗೂ ವಕೀಲ ಪ್ರೇಮ್‌ ತಿಳಿಸಿದ್ದಾರೆ.

ಈ ಕುರಿತು ಕಾರ್ಮಿಕ ಸಚಿವ ತನ್ವೀರ್‌ ಸೇಠ್‌ ಕರೆದಿದ್ದ ಕಾರ್ಮಿಕ ಒಕ್ಕೂಟದ ನಾಯಕರ ಸಭೆಯಲ್ಲಿ ಚರ್ಚಿಸಲಾಗಿದೆ. ನಗರದ 120 ಲೈಂಗಿಕ ಕಾರ್ಯಕರ್ತೆಯರು ಈಗಾಗಲೇ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದರು.

ಬೆಂಗಳೂರಿನಲ್ಲಿರುವ ಲೈಂಗಿಕ ಕಾರ್ಯಕರ್ತೆಯರಿಗೆ ಪೊಲೀಸರ ಕಿರುಕುಳ ತಪ್ಪಬೇಕು. ಜಗತ್ತಿನಲ್ಲಿ ಪ್ರಾಚೀನವಾದ ಈ ವೃತ್ತಿಗೆ ಕಾನೂನಿನ ರಕ್ಷಣೆ ನೀಡಬೇಕೆಂಬುದು ಅಸ್ತಿತ್ವಕ್ಕೆ ಬರಲಿರುವ ಒಕ್ಕೂಟದ ಪ್ರಮುಖ ಬೇಡಿಕೆ.

(ಪಿಟಿಐ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X