ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ಸು, ಭಾರೀ ವಾಹನಗಳಿಗೆ ನಿಮ್ಹಾನ್ಸ್‌ ರಸ್ತೆ ಬಂದ್‌?

By Staff
|
Google Oneindia Kannada News

ಬಸ್ಸು, ಭಾರೀ ವಾಹನಗಳಿಗೆ ನಿಮ್ಹಾನ್ಸ್‌ ರಸ್ತೆ ಬಂದ್‌?
ಸರ್ಕಾರಿ ಆಸ್ಪತ್ರೆಗಳ ಆರೋಗ್ಯವನ್ನು ಗಮನಿಸಲು ವಿಶೇಷ ಸಮಿತಿ

ಬೆಂಗಳೂರು : ನಿಮ್ಹಾನ್ಸ್‌ ಕ್ಯಾಂಪಸ್‌ ಮೂಲಕ ಸಾಗುವ ಬಿ.ಎಂ.ಟಿ.ಸಿ ಬಸ್‌ಗಳು ಸೇರಿದಂತೆ ಎಲ್ಲ ರೀತಿಯ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಉಚ್ಚ ನ್ಯಾಯಾಲಯ, ನಗರ ಸಂಚಾರ ವಿಭಾಗದ ಪೋಲೀಸರಿಗೆ ಸೂಚಿಸಿದೆ.

ಬಿ.ಕೃಷ್ಣ ಭಟ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ಕೆ. ಸೋಧಿ ಮತ್ತು ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶವನ್ನು ನೀಡಿದೆ.

ಕ್ಯಾಂಪಸ್‌ ಮೂಲಕ ಭಾರೀ ವಾಹನಗಳು ಸಾಗುವುದರಿಂದ ರೋಗಿಗಳು, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗೆ ಕಿರಿಕಿರಿಯಾಗುತ್ತಿದೆ ಎಂದು ನಿಮ್ಹಾನ್ಸ್‌ ಆಡಳಿತ ಮಂಡಳಿ ಈ ಹಿಂದೆ ದೂರು ಸಲ್ಲಿಸಿತ್ತು.

ಸಮಿತಿ : ನಗರದ ಸರ್ಕಾರಿ ಆಸ್ಪತ್ರೆಗಳ ಕಾರ್ಯವೈಖರಿಯನ್ನು ಪರಿಶೀಲಿಸಲು, ಹಿರಿಯ ವ್ಯೆದ್ಯರನ್ನು ಒಳಗೊಂಡ ತಜ್ಞರ ಸಮಿತಿ ರಚಿಸಲು ಹೈಕೋರ್ಟ್‌ ಪೀಠ ತೀರ್ಮಾನಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X