ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಾಫಿಯಾ ವಿರುದ್ಧ ಮಣ್ಣಿನ ಮಗನ ಹೋರಾಟ

By Staff
|
Google Oneindia Kannada News

ಭೂಮಾಫಿಯಾ ವಿರುದ್ಧ ಮಣ್ಣಿನ ಮಗನ ಹೋರಾಟ
ನನ್ನ ಇಬ್ಬರು ಮಕ್ಕಳನ್ನು ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಿಸುವುದಿಲ್ಲ -ಹೆಚ್‌.ಡಿ.ದೇವೇಗೌಡ

ಬೆಂಗಳೂರು : ಭೂ ಮಾಫಿಯಾ ಬಗ್ಗೆ ನಮ್ಮ ಹೋರಾಟ ನಿರಂತರ. ಮೇ ತಿಂಗಳ ಮೊದಲ ವಾರದಲ್ಲಿ ಹತ್ತು ಲಕ್ಷ ಬಡಜನರನ್ನು ಸೇರಿಸಿ ಪ್ರತಿಭಟನೆ ನಡೆಸುತ್ತೇನೆ. ಇದು ನನ್ನ ಅಂತಿಮ ಹೋರಾಟ ಎಂದು ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಡಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಜೆಡಿಎಸ್‌ ಆಯೋಜಿಸಿದ್ದ ಗ್ರಾಮೀಣ ಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಧಾನಿ ನಗರದ ಸುತ್ತಮುತ್ತಲಿನ 45 ಸಾವಿರ ಎಕರೆ ಭೂಗಳ್ಳರ ಪಾಲಾಗಿದೆ ಎಂದರು.

ಆ ಭೂಮಿಯನ್ನು ವಿಲೇವಾರಿ ಮಾಡಲು ಸಚಿವ ಸಂಪುಟ ಮುಂದಾಗಬೇಕು. ಈ ಕ್ರಮದಿಂದಾಗಿ ಸರ್ಕಾರಕ್ಕೆ ಐದು ಸಾವಿರ ಕೋಟಿ ರೂ. ಆದಾಯ ಬರುತ್ತದೆ. ರಾಜ್ಯದ ಜನಹಿತಕ್ಕೆ ಅಕ್ರಮ ಸಂಪತ್ತು ಬಳಕೆಯಾಗಬೇಕು. ಮುಖ್ಯಮಂತ್ರಿ ಧರ್ಮಸಿಂಗ್‌ ಹಾಗೂ ಸೋನಿಯಾ ಗಾಂಧಿ ಈ ವಿಚಾರಕ್ಕೆ ಸಮ್ಮತಿಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ ಯಾರೊಬ್ಬರ ಸ್ವತ್ತಲ್ಲ. ನಾನು ಕುಟುಂಬ ರಾಜಕಾರಣ ಮಾಡುತ್ತಿಲ್ಲ. ನನ್ನ ಇಬ್ಬರು ಮಕ್ಕಳನ್ನು ಮುಖ್ಯಮಂತ್ರಿ ಕುರ್ಚಿ ಮೇಲೆ ಎಂದಿಗೂ ಕೂರಿಸುವುದಿಲ್ಲ ಎಂದು ದೇವೇಗೌಡ ಘೋಷಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಲ್ಲಿ ಆಯ್ಕೆಗೊಂಡಿರುವ 37ಸಾವಿರ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗ್ರಾಮೀಣ ಜನೋತ್ಸವ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಪರಿವರ್ತನೆಯಾಗಿತ್ತು.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X