ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಗಾದಿ ಸಂಭ್ರಮಕ್ಕೆ ಕಳ್ಳಬಟ್ಟಿ : 22ಮಂದಿ ಬಲಿ

By Super
|
Google Oneindia Kannada News

ಯುಗಾದಿ ಸಂಭ್ರಮಕ್ಕೆ ಕಳ್ಳಬಟ್ಟಿ : 22ಮಂದಿ ಬಲಿ
ಕೂಲಿಗಾಗಿ ವಲಸೆ ಬಂದವರು ಬದುಕು ಕಳೆದುಕೊಂಡ ಕಥೆ!

ಬೆಂಗಳೂರು : ನೆಲಮಂಗಲದ ಮೂರು ಹಳ್ಳಿಗಳಲ್ಲಿ ಈ ಸಲದ ಯುಗಾದಿ ಬೆಲ್ಲಕ್ಕಿಂತಲೂ ಬೇವನ್ನೇ ಹೆಚ್ಚು ನೀಡಿದೆ. ಹಬ್ಬದ ಸಂಭ್ರಮದಲ್ಲಿ ಕಳ್ಳಬಟ್ಟಿ ಸಾರಾಯಿ ಸೇವಿಸಿದ 22ಮಂದಿ ಮೃತಪಟ್ಟಿದ್ದು, ಸ್ಮಶಾನ ಮೌನ ಅಲ್ಲಿ ನೆಲೆಸಿದೆ.

ಯುಗಾದಿಯ ಮಾರನೇ ದಿನ ಬಾಡೂಟದ ಜತೆ ಕಳ್ಳಬಟ್ಟಿ ಸೇವಿಸಿದ ಕುಟುಂಬಗಳು ಈಗ ತತ್ತರಿಸಿವೆ. ಐವರು ಮಹಿಳೆಯರು ಸೇರಿದಂತೆ, 22ಮಂದಿ ಮೃತಪಟ್ಟಿದ್ದು, 35ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ಈ ದುರ್ಘಟನೆಯಲ್ಲಿ ಕೂಲಿಕಾರ್ಮಿಕರಲ್ಲದೇ ಶಿಕ್ಷಕ ಹಾಗೂ ಪದವೀಧರನೊಬ್ಬ ಮೃತಪಟ್ಟಿದ್ದಾನೆ. ಕೊಪ್ಪ, ರಾಣೆ ಬೆನ್ನೂರು, ಶಿವಮೊಗ್ಗ, ತಮಿಳುನಾಡಿನಿಂದ ಕೂಲಿಗಾಗಿ ವಲಸೆ ಬಂದಿದ್ದ ಮಂದಿ ಬದುಕನ್ನೇ ಕಳೆದುಕೊಂಡಿದ್ದಾರೆ. ಕೊಪ್ಪದಿಂದ ಕೂಲಿಗಾಗಿ ವಲಸೆ ಬಂದಿದ್ದ ಹತ್ತು ಮಕ್ಕಳ ತಾಯಿ ರಾಣಿ ಎಂಬಾಕೆ ಕಳ್ಳಬಟ್ಟಿಗೆ ಬಲಿಯಾಗಿದ್ದಾಳೆ. ಸತ್ತವರಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ.

ನೆಲಮಂಗಲ ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತಿಯಿಂದ ಕಲ್ಲುಬೆಂಚಿನ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಅಕ್ರಮ ಸಾರಾಯಿ ಮಾರಾಟ ಮಾಡಿದ ಆರೋಪದ ಮೇಲೆ ಪೋಲಿಸರು ಮೂವರನ್ನು ಬಂಧಿಸಿದ್ದಾರೆ.(ಇನ್ಫೋ ವಾರ್ತೆ)

English summary
As many as 22 persons died and more than 35 persons are battling for life after consuming spurious arrack in Nelamangala taluk in Bangalore rural district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X