ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಗರುಡ’ ಪಾರ್ಕಿಂಗ್‌ ಬಹುಮಹಡಿ ಸಮುಚ್ಚಯ ರೆಡಿ

By Staff
|
Google Oneindia Kannada News

‘ಗರುಡ’ ಪಾರ್ಕಿಂಗ್‌ ಬಹುಮಹಡಿ ಸಮುಚ್ಚಯ ರೆಡಿ
ಒಂದೇ ಸೂರಿನಡಿ ನಾನಾ ವ್ಯಾಪಾರ ಮಳಿಗೆ, ಐದು ಮಲ್ಪಿಪ್ಲೆಕ್ಸ್‌ ಥಿಯೇಟರ್‌ಗಳು

ಬೆಂಗಳೂರು : ನಗರದ ಮಗರತ್‌ ರಸ್ತೆಯಲ್ಲಿ 90ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗರುಡ ಎಂಬ ಬಹುಮಹಡಿ ಪಾರ್ಕಿಂಗ್‌ ಕಾಂಪ್ಲೆಕ್ಸನ್ನು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಉದ್ಘಾಟಿಸಿದರು.

ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಮೆವರಿಕ್‌ ಹೋಲ್ಡಿಂಗ್ಸ್‌ ಅಂಡ್‌ ಇನ್‌ವೆಸ್ಟ್‌ಮೆಂಟ್ಸ್‌ ಪ್ರೆೃವೇಟ್‌ ಲಿಮಿಟೆಡ್‌ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಈ ಸಂಕೀರ್ಣ ಮೇ ತಿಂಗಳ ಮೊದಲ ವಾರದಿಂದ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.

ನಗರದ ವಾಹನ ನಿಲುಗಡೆ ಸಮಸ್ಯೆಯ ನಿವಾರಣೆಗೆ ಗರುಡ ಪೂರಕವಾಗಲಿದೆ. ಹನ್ನೊಂದು ಅಂತಸ್ತುಗಳ ಸಂಕೀರ್ಣದಲ್ಲಿ ಏಳು ಲಕ್ಷ ಚದರಡಿ ಸ್ಥಳವನ್ನು ವಾಹನ ನಿಲುಗಡೆಗೆ ಮೀಸಲಿಡಲಾಗಿದೆ. ಸಂಕೀರ್ಣದಲ್ಲಿ ಐದು ಮಲ್ಪಿಪ್ಲೆಕ್ಸ್‌ ಥಿಯೇಟರ್‌ಗಳ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ ವಿವಿಧ ವ್ಯಾಪಾರ ಮಳಿಗೆಗಳು ತಲೆ ಎತ್ತಲಿವೆ.

ಪಾಲಿಕೆ ಮತ್ತು ಮೆವರಿಕ್‌ ಕಂಪನಿ ಒಪ್ಪಂದದ ಪ್ರಕಾರ, ಮುಂದಿನ ಮೂವತ್ತು ವರ್ಷಗಳ ಕಾಲ ಮೆವರಿಕ್‌ ಕಂಪನಿಯು ಸಂಕೀರ್ಣದ ನಿರ್ವಹಣೆಗಾಗಿ, ಪ್ರತಿವರ್ಷ ಪಾಲಿಕೆಗೆ ನಾಲ್ಕುಕೋಟಿಯನ್ನು ನಿರ್ವಹಣಾ ಶುಲ್ಕವಾಗಿ ಪಾವತಿಸಲಿದೆ. ಗುತ್ತಿಗೆ ಅವಧಿ ಮುಗಿದ ನಂತರ ಕಂಪನಿಯು ಸಂಕೀರ್ಣವನ್ನು ಪಾಲಿಕೆಗೆ ಹಸ್ತಾಂತರಿಸಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X