ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯನ್‌ ಏರ್‌ಲೈನ್ಸ್‌ ಪ್ರಯಾಣ ದರದಲ್ಲಿ ಹೆಚ್ಚಳ

By Staff
|
Google Oneindia Kannada News

ಇಂಡಿಯನ್‌ ಏರ್‌ಲೈನ್ಸ್‌ ಪ್ರಯಾಣ ದರದಲ್ಲಿ ಹೆಚ್ಚಳ
ಸದ್ಯದಲ್ಲಿಯೇ ಪೆಟ್ರೋಲ್‌ ಮತ್ತು ಡಿಸೇಲ್‌ ಮತ್ತಷ್ಟು ತುಟ್ಟಿ -ಮಣಿ ಶಂಕರ್‌ ಅಯ್ಯರ್‌

ನವದೆಹಲಿ : ಜಾಗತಿಕ ಮಾರುಕಟ್ಟೆಯಲ್ಲಿ ವಿಮಾನ ಇಂಧನದ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಏ.15ರಿಂದ ವಿಮಾನ ಪ್ರಯಾಣದ ದರಗಳನ್ನು ಇಂಡಿಯನ್‌ ಏರ್‌ಲೈನ್ಸ್‌ ಹೆಚ್ಚಿಸುತ್ತಿದೆ.

ಪ್ರತಿ ಕಿ.ಲೋ ಲೀಟರ್‌ಗೆ 27,250 ರೂ.ಗಳಿಂದ 32,250ರೂ.ಗಳಿಗೆ ವಿಮಾನ ಇಂಧನದ ಬೆಲೆಯಲ್ಲಿ ಏ.1ರಿಂದ ಏರಿಕೆ ಕಂಡು ಬಂದಿದೆ. ಹೀಗಾಗಿ ಪ್ರಯಾಣ ದರದಲ್ಲಿ ಶೇ.12ರಷ್ಟು ಹೆಚ್ಚಳ ಉಂಟಾಗುವ ಸಾಧ್ಯತೆಗಳಿವೆ ಎಂದು ಇಂಡಿಯನ್‌ ಏರ್‌ಲೈನ್ಸ್‌ನ ವಕ್ತಾರರು ತಿಳಿಸಿದ್ದಾರೆ.

ಪೆಟ್ರೋಲ್‌-ಡೀಸೆಲ್‌ನಲ್ಲೂ ಹೆಚ್ಚಳ : ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಒಂದೇ ಸಮನೇ ಹೆಚ್ಚುತ್ತಿದೆ. ತೈಲ ಬೆಲ ಹೆಚ್ಚಳದ ಭಾರ ಹೊರಲು ಭಾರತೀಯರು ಸಿದ್ಧರಾಗಬೇಕೆಂದು ಇಂಧನ ಸಚಿವ ಮಣಿಶಂಕರ್‌ ಅಯ್ಯರ್‌ ಸೂಚನೆ ನೀಡಿದ್ದಾರೆ.

ಪೆಟ್ರೋಲ್‌-ಡೀಸೆಲ್‌ ಬೆಲೆಗಳನ್ನು ಕ್ರಮವಾಗಿ ರೂ. 4.69 ಹಾಗೂ ರೂ. 5.18ರಷ್ಟು ಹೆಚ್ಚಳಕ್ಕೆ ತೈಲ ಕಂಪನಿಗಳು ಒತ್ತಾಯಿಸಿವೆ ಎಂದು ಇಂಧನ ಬೆಲೆ ಹೆಚ್ಚಳದ ಅನಿವಾರ್ಯತೆಯನ್ನು ಮಣಿಶಂಕರ್‌ ವ್ಯಕ್ತಪಡಿಸಿದ್ದಾರೆ.
(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X