ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೆೃಸ್ತ ಧರ್ಮಗುರು ಪೋಪ್‌ಗೆ ಅಂತಿಮ ನಮನ

By Staff
|
Google Oneindia Kannada News

ಕ್ರೆೃಸ್ತ ಧರ್ಮಗುರು ಪೋಪ್‌ಗೆ ಅಂತಿಮ ನಮನ
ಕ್ರಿಸ್ತನಿಗೆ ಪರಮಪ್ರಿಯ ಸಂತನಾಗಿದ್ದ ಪೀಟರ್‌ ಅವರ ಸಮಾಧಿ ಇರುವ ಸ್ಥಳದ ಸಮೀಪದಲ್ಲೇ ಹೂಳಲಾಯಿತು.

ವ್ಯಾಟಿಕನ್‌ನಗರ : ನಾನಾದೇಶಗಳ ಗಣ್ಯರು ಮತ್ತು ದುಃಖತಪ್ತ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಪೋಪ್‌ ಎರಡನೇ ಜಾನ್‌ಪಾಲ್‌ ಅಂತ್ಯಕ್ರಿಯೆ ಶುಕ್ರವಾರ ನೆರವೇರಿತು.

ಕ್ಯಾಥೋಲಿಕ್‌ ಸಮುದಾಯದ ಪವಿತ್ರ ನಗರ ವ್ಯಾಟಿಕನ್‌ನ ಸೇಂಟ್‌ ಪೀಟರ್ಸ್‌ ಬೆಸಿಲಿಕಾದಲ್ಲಿ ಸಕಲ ಧಾರ್ಮಿಕ ಗೌರವ, ವಿಧಿವಿಧಾನಗಳೊಂದಿಗೆ ಪೋಪ್‌ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶುಕ್ರವಾರ ನೆರವೇರಿತು.

ಕ್ರಿಸ್ತನಿಗೆ ಪರಮಪ್ರಿಯ ಸಂತನಾಗಿದ್ದ ಪೀಟರ್‌ ಅವರ ಸಮಾಧಿ ಇರುವ ಸ್ಥಳದ ಸಮೀಪದಲ್ಲೇ ಹೂಳಲಾಯಿತು.ಪೋಪ್‌ ಶವವಿರುವ ಓಕ್‌ ಮರದ ಪೆಟ್ಟಿಗೆಯನ್ನು ಹೂಳುತ್ತಿದ್ದಂತೆ ನೆರೆದಿದ್ದ ಜನಸ್ತೋಮ ಕಣ್ಣೀರಿಟ್ಟಿತು. ಕಾರ್ಡಿನಲ್‌ ತಂಡದ ವತಿಯಿಂದ ಬೈಬಲ್‌ ವಾಚಿಸಲಾಯಿತು. ಪೋಪ್‌ ಅವರ ಉತ್ತರಾಧಿಕಾರಿಯೆಂದೇ ಬಿಂಬಿಂತವಾಗುತ್ತಿರುವ ಕಾರ್ಡಿನಲ್‌ ಜೋಸೆಫ್‌ ರಾಟ್ಜಿಂಗರ್‌ ಅಂತಿಮ ಸಂಸ್ಕಾರದ ಜವಾಬ್ದಾರಿ ವಹಿಸಿಕೊಂಡಿದ್ದರು.

ಪೋಪ್‌ ಹುದ್ದೆಗೆ ಬರುವ ಮೊದಲು ಜಾನ್‌ಪಾಲ್‌ ಅವರಿಗೆ ಸಿಕ್ಕ ಧಾರ್ಮಿಕ ಪದಕಗಳು ಮತ್ತು ಲ್ಯಾಟಿನ್‌ ಭಾಷೆಯಲ್ಲಿ ಅವರ ಜೀವನ ಚರಿತ್ರೆಯ ಕೆಲ ಸಾಲುಗಳನ್ನು ಕೆತ್ತಿರುವ ಫಲಕವನ್ನು ಪೆಟ್ಟಿಗೆಯಲ್ಲಿ ಇಡಲಾಗಿತ್ತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X