ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದಿಂದ ವೃತ್ತಿಶಿಕ್ಷಣ ಶುಲ್ಕ ನಿಗದಿ

By Staff
|
Google Oneindia Kannada News

ಸರ್ಕಾರದಿಂದ ವೃತ್ತಿಶಿಕ್ಷಣ ಶುಲ್ಕ ನಿಗದಿ
ಒಂದೊಂದು ಕಾಲೇಜಿಗೆ ಒಂದೊಂದು ಶುಲ್ಕ ವಿಧಿಸಿದ ಶುಲ್ಕ ರಚನಾ ಸಮಿತಿ

ಬೆಂಗಳೂರು : ಶುಲ್ಕ ನಿಗದಿ ಸಮಿತಿಯು 2006-07ನೇ ಸಾಲಿಗೆ ಇಂಜಿನಿಯರಿಂಗ್‌, ಎಂ.ಟೆಕ್‌, ಎಂ ಸಿ ಎ, ಆಯುರ್ವೇದಿಕ್‌, ಹೋಮಿಯೋಪತಿ, ನ್ಯಾಚುರೋಪತಿ, ನರ್ಸಿಂಗ್‌ ಮತ್ತು ಯುನಾನಿ ಹಾಗೂ ಇನ್ನಿತರ ಕೋರ್ಸ್‌ಗಳ ಶುಲ್ಕವನ್ನು ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ.

ಶುಲ್ಕವನ್ನು ಒಂದೊಂದು ಕಾಲೇಜಿಗೆ ಒಂದೊಂದು ರೀತಿಯಲ್ಲಿ ನಿಗದಿಪಡಿಸಲಾಗಿದೆ. ಈ ಮೊದಲು ಒಂದೇ ಮಾದರಿಯ ಶುಲ್ಕವಿರುತ್ತಿತ್ತು. ಇಸ್ಲಾಮಿಕ್‌ ಶಿಕ್ಷಣ ಅಕಾಡೆಮಿಯ ಪ್ರಕರಣವೊಂದರಲ್ಲಿ ನ್ಯಾಯಾಲಯವು ಈ ಕುರಿತು ತೀರ್ಪೊಂದನ್ನು ನೀಡಿತ್ತು. ಅದಕ್ಕಾಗಿ ಸರ್ಕಾರ ಖಾಸಗಿ ಕಾಲೇಜುಗಳ ಶುಲ್ಕ ರಚನೆಗೆ ನ್ಯಾಯಮೂರ್ತಿ ರಂಗವಿಠಲಾಚಾರ್‌ ಅವರನ್ನು ರಚಿಸಿತ್ತು.

ನ್ಯಾಯಮೂರ್ತಿ ಮುರುಗೋಡ್‌ ಸಮಿತಿಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶುಲ್ಕ ಮುಂದುವರಿಯಲಿದೆ.

ರಂಗವಿಠಲಾಚಾರ್‌ ಸಮಿತಿ ನಿಗದಿಗೊಳಿಸಿದ ಶುಲ್ಕ ಪ್ರಸಕ್ತ ವರ್ಷದಿಂದಲೇ ಜಾರಿಯಾಗುತ್ತಿದೆ. ಒಂದು ವೇಳೆ ಸವೋಚ್ಚ ನ್ಯಾಯಾಲಯ ಇಂಥ ಸಮಿತಿಗಳನ್ನು ಬದಿಗಿರಿಸಿ, ಏಕರೂಪ ಶುಲ್ಕಕ್ಕೆ ಅವಕಾಶ ಮಾಡಿಕೊಟ್ಟರೆ ಮುರುಗೋಡ್‌ ಮತ್ತು ರಂಗವಿಠಲಾಚಾರ್‌ ಸಮಿತಿಯ ಶುಲ್ಕ ಪದ್ಧತಿಗಳು ಮಾನ್ಯತೆ ಕಳೆದುಕೊಳ್ಳಲಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X