ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಿವುಡ್‌ ಕಿಂಗ್‌ ಶಾರುಖ್‌ಖಾನ್‌ ಸಂಗೀತ ಸಂಜೆ

By Staff
|
Google Oneindia Kannada News

ಬಾಲಿವುಡ್‌ ಕಿಂಗ್‌ ಶಾರುಖ್‌ಖಾನ್‌ ಸಂಗೀತ ಸಂಜೆ
ಹಿಂದಿ ಚಿತ್ರರಂಗದ ತಾರೆಗಳಿಂದ ಎದೆ ಝಲ್‌ ಎನ್ನಿಸುವ ಸಂಗೀತ-ನೃತ್ಯಗಳ ಹಬ್ಬ

ಬೆಂಗಳೂರು : ಹಿಂದಿ ಚಿತ್ರರಂಗದ ಜನಪ್ರಿಯ ನಾಯಕ ಶಾರುಖ್‌ ಖಾನ್‌, ಲಿಟಲ್‌ ಕ್ವೀನ್‌ ರಾಣಿ ಮುಖರ್ಜಿ ಸೇರಿದಂತೆ ಬಾಲಿವುಡ್‌ ಪ್ರಪಂಚದ ಗ್ಲಾಮರಸ್‌ ತಾರೆಯರು ಉದ್ಯಾನ ನಗರದಲ್ಲಿ ಭಾನುವಾರ(ಏ.10) ಸಂಗೀತದ ರಸದೌತಣ ನೀಡಲು ಸಜ್ಜಾಗಿದ್ದಾರೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ 7ಕ್ಕೆ ‘ಟೆಂಪ್ಟೇಶನ್‌-2005’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಶಾರುಖ್‌ ಖಾನ್‌, ರಾಣಿ ಮುಖರ್ಜಿ, ಲಾರದತ್ತ, ಮಲೈಕಾ ಅರೋರಾ, ಜಾಹೀದ್‌ ಖಾನ್‌ ಮತ್ತಿತರರ ನೃತ್ಯ-ಸಂಗೀತವನ್ನು ಸವಿಯುವ ಅವಕಾಶ ಕನ್ನಡಿಗರಿಗೆ ಸಿಕ್ಕಿದೆ.

ಈ ವಿಶೇಷ ಕಾರ್ಯಕ್ರಮಕ್ಕಾಗಿ ಮುಂಬೈನಿಂದ 50ಟನ್‌ನಷ್ಟು ಸಂಗೀತ ಉಪಕರಣಗಳನ್ನು ತರಿಸಲಾಗಿದ್ದು, 500ಮಂದಿ ತಂತ್ರಜ್ಞರು ಏ.4ರಿಂದಲೇ ಸಿದ್ಧತೆ ನಡೆಸಿದ್ದಾರೆ. 500 ರೂ.ಗಳಿಂದ ಹತ್ತು ಸಾವಿರದ ತನಕ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಕೆಫೆ, ಕಾಫಿ ಡೇ ಮಳಿಗೆಗಳಲ್ಲಿ ಟಿಕೆಟ್‌ಗಳು ಲಭ್ಯ. ಹೆಚ್ಚಿನ ವಿವರಗಳಿಗೆ ದೂರವಾಣಿ : 2521 2195ನ್ನು ಸಂಪರ್ಕಿಸಬಹುದು.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X