ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದನೇ ತರಗತಿಯಿಂದ ಆಂಗ್ಲ ಬೋಧನೆ : ಸಮೀಕ್ಷೆ

By Staff
|
Google Oneindia Kannada News

ಒಂದನೇ ತರಗತಿಯಿಂದ ಆಂಗ್ಲ ಬೋಧನೆ : ಸಮೀಕ್ಷೆ
ತಜ್ಞರ ವರದಿ ಮತ್ತು ಗ್ರಾಮೀಣರ ಆಶಯಕ್ಕೆ ಆದ್ಯತೆ -ಬಿ.ಶಿವರಾಂ

ಬೆಂಗಳೂರು : ಒಂದನೇ ತರಗತಿಯಿಂದ ಇಂಗ್ಲೀಷನ್ನು ದ್ವಿತೀಯ ಭಾಷೆಯಾಗಿ ಮಕ್ಕಳಿಗೆ ಕಲಿಸುವ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಸಂಪುಟ ನಿರ್ಧರಿಸಿದೆ ಎಂದು ವಾರ್ತಾಸಚಿವ ಬಿ.ಶಿವರಾಂ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಶೈಕ್ಷಣಿಕ ವರ್ಷದಿಂದ ಆಂಗ್ಲಭಾಷೆಯನ್ನು ಒಂದನೇ ತರಗತಿಯಿಂದ ಅನುಷ್ಠಾನಗೊಳಿಸಲು ಸರ್ಕಾರ ಚಿಂತನೆ ನಡೆಸಿತ್ತು. ಈ ಬಗ್ಗೆ ಪರ-ವಿರೋಧ ವಾದಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಸಮೀಕ್ಷೆಗೆ ಮುಂದಾಗಿದೆ ಎಂದರು.

ಒಂದನೇ ತರಗತಿಯಿಂದಲೇ ಮಕ್ಕಳಿಗೆ ಇಂಗ್ಲೀಷ್‌ ಕಲಿಸಿದರೇ ಸೂಕ್ತವೆಂದು ಅನೇಕ ವರದಿಗಳು ಹೇಳುತ್ತಿವೆ. ಅಲ್ಲದೇ ಗ್ರಾಮೀಣರಲ್ಲಿ ಆಂಗ್ಲ ವ್ಯಾಮೋಹ ಹೆಚ್ಚುತ್ತಿರುವುದನ್ನು ಪರಿಗಣಿಸಿ, ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿತ್ತು ಎಂದು ಬಿ. ಶಿವರಾಂ ಅಭಿಪ್ರಾಯಪಟ್ಟಿದ್ದಾರೆ.
(ಇನ್ಫೋ ವಾರ್ತೆ) )

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X