ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಛಾಪಾ ಕಾಗದ ಹಗರಣ : ಮೂವರಿಗೆ ಶಿಕ್ಷೆ

By Staff
|
Google Oneindia Kannada News

ನಕಲಿ ಛಾಪಾ ಕಾಗದ ಹಗರಣ : ಮೂವರಿಗೆ ಶಿಕ್ಷೆ
ರಾಜ್ಯದ ವಿಶೇಷ ನ್ಯಾಯಾಲಯದಿಂದ ಮಹತ್ವದ ತೀರ್ಪು

ಬೆಂಗಳೂರು : ಬಹುಕೋಟಿ ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ನಗರದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಪ್ರಥಮ ಬಾರಿಗೆ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.

ಛಾಪಾ ಕಾಗದ ಮುದ್ರಣ, ಮಾರಾಟ, ವಿತರಣೆ ,ಶೇಖರಣೆ ಮತ್ತಿತರ ರಾಷ್ಟ್ರದ್ರೋಹವೆಸಗಿದ ಆರೋಪದ ಮೇಲೆ 2001ರಲ್ಲಿ ಬಂಧಿತರಾಗಿದ್ದ ಎಸ್‌.ಕೃಷ್ಣಮೂರ್ತಿ, ಪಿ.ಮಾರಿ ಮುತ್ತು ಮತ್ತು ಜಿ.ರಾಜಾ ಎಂಬುವವರಿಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎ.ಟಿ.ಮನೋಳಿ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

ಈ ಮೂವರನ್ನು ಕಳೆದ ನಾಲ್ಕುವರ್ಷಗಳ ಹಿಂದೆ ಬಂಧಿಸಿದ್ದ ಪೋಲೀಸರು 56ಲಕ್ಷ ಮೌಲ್ಯದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದರು.

ರಾಷ್ಟ್ರದೆಲ್ಲೆಡೆ ಸದ್ದು ಮಾಡಿದ ಛಾಫಾ ಹಗರಣಕ್ಕೆ ಸಂಬಂಧಿಸಿದಂತೆ 48 ಪ್ರಕರಣಗಳ ತನಿಖೆಯನ್ನು ಸುಪ್ರಿಂಕೋರ್ಟ್‌ ಆದೇಶದನ್ವಯ ಸಿಬಿಐ ನಡೆಸುತ್ತಿದೆ. ಅದರಲ್ಲಿ 10ಪ್ರಕರಣಗಳು ರಾಜ್ಯಕ್ಕೆ ಸಂಬಂಧಿಸಿದ್ದು, ಇಲ್ಲಿಯೇ ವಿಚಾರಣೆ ನಡೆಯುತ್ತಿದೆ. ನ್ಯಾಯಾಧೀಶ ಮನೋಳಿ ತೀರ್ಪು ನೀಡಿದ ಪ್ರಕರಣದಲ್ಲಿ ತೆಲಗಿ ಪಾಲುದಾರನಾಗಿರಲಿಲ್ಲ ಎನ್ನಲಾಗಿದೆ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X