ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

72ನೇ ಸಾಹಿತ್ಯ ಸಮ್ಮೇಳನ ಮುಂದೂಡಲ್ಪಡುವುದೇ?

By Staff
|
Google Oneindia Kannada News

72ನೇ ಸಾಹಿತ್ಯ ಸಮ್ಮೇಳನ ಮುಂದೂಡಲ್ಪಡುವುದೇ?
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಡಳಿತ ಯಂತ್ರದಿಂದ ‘ಬರ’ದ ಸಿದ್ಧತೆ

ಬೀದರ್‌ : ಮೇ6ರಿಂದ 8ರವರೆಗೆ ಬೀದರ್‌ನಲ್ಲಿ ಆಯೋಜಿಸಲಾಗಿರುವ 72ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿಯಾದ ದಿನಾಂಕಗಳಂದು ನಡೆಯುವುದೇ ಎನ್ನುವ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ.

ಸಮ್ಮೇಳನಕ್ಕೆ ತಿಂಗಳಷ್ಟೇ ಉಳಿದಿದ್ದು , ಪೂರ್ವಭಾವಿ ಸಿದ್ಧತೆಗಳು ವ್ಯವಸ್ಥಿತವಾಗಿ ಆರಂಭಗೊಂಡಿಲ್ಲ. ಈವರೆಗೆ ಸರ್ಕಾರದಿಂದ ಸ್ವಾಗತ ಸಮಿತಿಗೆ ಬಿಡಿಗಾಸು ಬಿಡುಗಡೆಯಾಗಿಲ್ಲ ಎನ್ನುವ ದೂರುಗಳಿವೆ. ಅಲ್ಲದೇ ಸ್ವಾಗತ ಸಮಿತಿಯೂ ಸೇರಿದಂತೆ 30 ಉಪಸಮಿತಿಗಳಲ್ಲಿ ಒಂದೂ ಪೂರ್ಣ ಪ್ರಮಾಣದಲ್ಲಿ ರಚನೆಯಾಗಿಲ್ಲ.

ಸಮ್ಮೇಳನಕ್ಕೆ ಸ್ಮರಣ ಸಂಚಿಕೆಯನ್ನು ರೂಪಿಸುವ ಯಾರೂ ಸಹಾ ತಲೆಕೆಡಿಸಿಕೊಂಡಿಲ್ಲ. ಈ ಎಲ್ಲದರ ನಡುವೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರ ಶೇಖರ್‌ ಪಾಟೀಲ್‌ ನಿಗದಿಯಾಗಿರುವ ದಿನಗಳಂದೇ ಸಮ್ಮೇಳನ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

1985ರಲ್ಲಿ ಹಾ.ಮ.ನಾಯಕ್‌ ಅಧ್ಯಕ್ಷತೆಯಲ್ಲಿ ಇಲ್ಲಿ ಸಾಹಿತ್ಯ ಸಮ್ಮೇಳನ ನಡೆದಿತ್ತು. ಮತ್ತೆ 72ನೇ ಸಾಹಿತ್ಯ ಸಮ್ಮೇಳನ ಬೀದರ್‌ಗೆ ಒಲಿದಿದೆ. ಹಿರಿಯ ಸಾಹಿತಿ ಶಾಂತರಸ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಸುಡುಬಿಸಿಲಿನ ನಡುವೆಯೇ ಬೀದರ್‌ ಸಮ್ಮೇಳನಕ್ಕೆ ಸಜ್ಜಾಗ ಬೇಕಾಗಿದೆ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X