ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಅಕ್ರಮ ಧೋರಣೆ ಪ್ರಶ್ನಿಸಿ ಪ್ರಧಾನಿಗೆ ಮೊರೆ

By Staff
|
Google Oneindia Kannada News

ಆಂಧ್ರಅಕ್ರಮ ಧೋರಣೆ ಪ್ರಶ್ನಿಸಿ ಪ್ರಧಾನಿಗೆ ಮೊರೆ
ಆಂಧ್ರ ಅಕ್ರಮ ನೀರಾವರಿ ಯೋಜನೆಗಳತ್ತ ಸರ್ಕಾರದ ದಿವ್ಯ ನಿರ್ಲಕ್ಷ್ಯ -ಯಡಿಯೂರಪ್ಪ

ಬೆಂಗಳೂರು : ಆಂಧ್ರ ಪ್ರದೇಶ ಕೃಷ್ಣಾ ಮತ್ತು ಗೋದಾವರಿ ಕಣಿವೆಯಲ್ಲಿ ಕೈಗೊಂಡಿರುವ ಹತ್ತು ಅಕ್ರಮ ನೀರಾವರಿ ಯೋಜನೆಗಳ ನೈತಿಕತೆಯನ್ನು ಪ್ರಶ್ನಿಸಿ, ಕಾಮಗಾರಿ ನಿಲ್ಲಿಸುವಂತೆ ಒತ್ತಾಯ ಹೇರಲು ಪ್ರಧಾನಿ ಬಳಿಗೆ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯಲು ಸರ್ಕಾರ ಸಮ್ಮತಿಸಿದೆ.

ವಿಧಾನಸಭೆಯಲ್ಲಿ ಈ ವಿಚಾರವಾಗಿ ಪ್ರತಿಪಕ್ಷಗಳು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡವು. ಆಂಧ್ರಪ್ರದೇಶಕ್ಕೆ ಅಧಿಕಾರಿಗಳ ತಂಡವನ್ನು ಕಳುಹಿಸಿ, ಅಕ್ರಮ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸುವ ಪ್ರತಿಪಕ್ಷಗಳ ಸಲಹೆಯನ್ನು ಸರ್ಕಾರ ತಳ್ಳಿಹಾಕಿತು.

ವಿಧಾನಸಭೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ, ಸರ್ಕಾರಕ್ಕೆ ಎಲ್ಲಾ ವಿಷಯ ಗೊತ್ತಿದ್ದರೂ ಮೌನವಹಿಸಿದೆ. ರಾಜ್ಯದ ಹಿತಕಾಯಲು ಪ್ರಧಾನಿಗೆ ಪತ್ರವನ್ನು ಬರೆಯಲು ಸಹಾ ಮುಂದಾಗಿಲ್ಲ. ಕೋರ್ಟ್‌ನ ಗಮನಕ್ಕೂ ಈ ವಿಚಾರವನ್ನು ತಂದಿಲ್ಲ ಎಂದು ಆರೋಪಿಸಿದರು.

ಅಂತಿಮವಾಗಿ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು, ಪ್ರಧಾನಿಗಳ ಬಳಿಗೆ ಸರ್ವಪಕ್ಷಗಳ ನಿಯೋಗ ಕರೆದೊಯ್ಯಲು ದಿನಾಂಕ ನಿಗದಿಪಡಿಸುವುದಾಗಿ ಮುಖ್ಯಮಂತ್ರಿ ಧರ್ಮಸಿಂಗ್‌ ಭರವಸೆ ನೀಡಿದರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X